ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ 6 ಸಾವಿರ ರನ್ ಗಳಿಸುವ ಮೂಲಕ ಐಪಿಎಲ್‍ನಲ್ಲಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ. ಈ ಮೂಲಕ ಭಾರತದ ಪರ 6 ಸಾವಿರ ರನ್ ಪೂರೈಸಿದ 5ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.
ಡೆಲ್ಲಿ ವಿರುದ್ಧ ನಡೆದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 6 ಸಾವಿರ ರನ್ ಪೂರೈಸಿ ದಾಖಲೆ ಬರೆದರು. ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಭಾರತದ ಸುರೇಶ್ ರೈನಾ (7,708 ರನ್), ವಿರಾಟ್ ಕೊಹ್ಲಿ (7621 ರನ್), ರೋಹಿತ್ ಶರ್ಮಾ (7303), ಗೌತಮ್ ಗಂಭೀರ್ (6402 ರನ್) ಸ್ಥಾನ ಪಡೆದಿದ್ದಾರೆ.
Advertisement
ಡೆಲ್ಲಿ ಪಂದ್ಯದಲ್ಲಿ 10 ರನ್ ಗಳಿಸಿದ್ದ ವೇಳೆ 36 ವರ್ಷದ ಧೋನಿ 6 ಸಾವಿರ ರನ್ ಪೂರೈಸಿದ ಆಟಗಾರರ ಕ್ಲಬ್ ಸೇರಿದರು. ಒಟ್ಟಾರೆ ಧೋನಿ 290 ಇನ್ನಿಂಗ್ಸ್ ಗಳಲ್ಲಿ 6,007 ರನ್ ಪೂರೈಸಿದ್ದಾರೆ. ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪ್ಲೇ ಆಫ್ ಆರ್ಹತೆ ಪಡೆದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಗಳಿಸುವ ಅವಕಾಶವನ್ನು ಕಳೆದುಕೊಂಡಿದೆ.
Advertisement
ಟಿ20 ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ, ಕ್ರಿಸ್ ಗೇಲ್ 21 ಶತಕ, 50 ಅರ್ಧ ಶತಕ ಸಿಡಿಸಿ 11,436 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ 335 ಪಂದ್ಯಗಳಿಂದ 30.70 ಸರಾಸರಿ ಯಲ್ಲಿ 9,119 ರನ್ ಸಿಡಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.