ಮುಂಬೈ: ಕ್ರೀಡೆಯಲ್ಲಿ ವಯಸ್ಸು ಕೇವಲ ನಂಬರ್ ಎಂದು ಸಾಬೀತು ಪಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ, ತಮ್ಮದೇ ತಂಡದ ಆಟಗಾರ ಬ್ರಾವೋ ಜೊತೆ 3 ರನ್ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಇರುವುದಾಗಿ ತೋರಿಸಿಕೊಟ್ಟಿದ್ದಾರೆ.
ಸದ್ಯ ಧೋನಿ ಹಾಗೂ ಬ್ರಾವೋ ರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ 3 ರನ್ ಓಡುವ ಚಾಲೆಂಜ್ ಪಡೆಯುವ ಧೋನಿ ಹಾಗೂ ಬ್ರಾವೋ ನಡುವೆ ನೆಕ್ ಟು ನೆಕ್ ಫೈಟ್ ನಡೆಯುತ್ತದೆ. ಈ ವೇಳೆ ಧೋನಿ ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಹೈದರಾಬಾದ್ ವಿರುದ್ಧ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಬ್ಬರ ನಡುವಿನ 3 ರನ್ ಡ್ಯಾಶ್ ಚಾಲೆಂಜ್ ನಡೆದಿದೆ.
When Thala challenged Champion for a three run dash, post the victory yesterday! Any guesses who wins it? #whistlepodu #SuperChampions ???????? pic.twitter.com/k8OzIPMyxo
— Chennai Super Kings (@ChennaiIPL) May 28, 2018
ಸ್ಟಪಿಂಗ್ ದಾಖಲೆ: ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಧೋನಿ ಸ್ಟಪಿಂಗ್ ದಾಖಲೆಯನ್ನು ಮಾಡಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಸ್ಟಪಿಂಗ್ ಮಾಡಿದ ರಾಬಿನ್ ಉತ್ತಪ್ಪ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ಪಟ್ಟಿಯಲ್ಲಿ 175 ಪಂದ್ಯದಲ್ಲಿ 33 ಸ್ಟಪಿಂಗ್ ಮಾಡಿರುವ ಧೋನಿ ಮೊದಲ ಸ್ಥಾನದಲ್ಲಿದ್ದರೆ, ರಾಬಿನ್ ಉತ್ತಪ್ಪ (32, 165 ಪಂದ್ಯ), ದಿನೇಶ್ ಕಾರ್ತಿಕ್ (32, 168 ಪಂದ್ಯ), ಸಹಾ (15, 115 ಪಂದ್ಯ) ಗಳೊಂದಿಗೆ ನಂತರದ ಸ್ಥಾನ ಪಡೆದಿದ್ದಾರೆ.
ಒಟ್ಟಾರೆ ಐಪಿಎಲ್ ನಲ್ಲಿ 175 ಪಂದ್ಯಗಳನ್ನು ಆಡಿರುವ ಧೋನಿ 40.16 ಸರಾಸರಿಯಲ್ಲಿ 4,016 ರನ್ ಗಳಿಸಿದ್ದು, ಇದರಲ್ಲಿ 20 ಅರ್ಧ ಶತಕಗಳು ಸೇರಿದೆ.