ಬೆಂಗಳೂರು: ಐಪಿಎಲ್ ಸೀಸನ್ 10ರ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನ ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 357 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ತಿದ್ದು, ಇದರಲ್ಲಿ 227 ಮಂದಿ ಭಾರತೀಯ ಆಟಗಾರರೇ ಇದ್ದಾರೆ.
Advertisement
ಉಳಿದಂತೆ 130 ಮಂದಿ ವಿದೇಶಿ ಆಟಗಾರರು ಹರಾಜಿಗೆ ಲಭ್ಯ ಇದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದ ಐವರು ಆಟಗಾರರು ಹರಾಜಿಗೆ ಇರೋದು ಈ ಬಾರಿ ವಿಶೇಷ. ಐಪಿಎಲ್ ಫ್ರಾಂಚೈಸಿಗಳಿಗೆ ಬೇಕಾಗಿರೋದು 76 ಆಟಗಾರರು ಮಾತ್ರ. ಐಪಿಎಲ್‍ನ ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿದ್ದು, ಯಾರು ಯಾವ ತಂಡದ ಪಾಲಾಗಲಿದ್ದಾರೆ ಅನ್ನೊದು ಕುತೂಹಲ ಮೂಡಿಸಿದೆ. ಎಲ್ಲರ ಕಣ್ಣು ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್‍ನ ಗ್ರಾಂಡ್‍ಹೋಮ್, ಆಫ್ರಿಕಾದ ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್, ಲಂಕಾದ ಅಸಿಲಾ ಗುಣರತ್ನೆ, ಭಾರತದ ಇಶಾಂತ್ ಶರ್ಮಾ ಮೇಲಿದೆ.
Advertisement
Advertisement
ಇನ್ನು ಆಟಗಾರರನ್ನು ಕೊಳ್ಳಲು ಯಾವ ಯಾವ ಫ್ರಾಂಚೈಸಿ ಬಳಿ ಎಷ್ಟೆಷ್ಟು ಹಣ ಇದೆ ಅನ್ನೋದನ್ನು ನೋಡೋದಾದ್ರೆ,
Advertisement
1. ಕಿಂಗ್ಸ್ ಇಲೆವೆನ್ ಪಂಜಾಬ್ – 23.35 ಕೋಟಿ
2. ಡೆಲ್ಲಿ ಡೇರ್ ಡೆವಿಲ್ಸ್ – 21.5 ಕೋಟಿ
3. ಸನ್ ರೈಸರ್ಸ್ ಹೈದ್ರಾಬಾದ್ – 20.9 ಕೋಟಿ
4. ಕೊಲ್ಕೊತಾ ನೈಟ್ ರೈಡರ್ಸ್ – 19.75 ಕೋಟಿ
5. ಜೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 19.01 ಕೋಟಿ
6. ಗುಜರಾತ್ ಲಯನ್ಸ್ – 14.35 ಕೋಟಿ
7. ರಾಯಲ್ ಚಾಲೆಂಜರ್ಸ್ ಬೆಂಗಳೂರು – 12.82 ಕೋಟಿ
8. ಮುಂಬೈ ಇಂಡಿಯನ್ಸ್ – 11.55 ಕೋಟಿ