ಚೆನ್ನೈ: ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿ ಐಫೋನ್‌ನನ್ನು ದೇಗುಲದ ಆಡಳಿತ ಮಂಡಳಿ ಹಿಂದಿರುಗಿಸಲ್ಲ ಎಂದಿರುವ ಘಟನೆಯೊಂದು ತಮಿಳುನಾಡಿನಲ್ಲಿ (tamilnadu) ನಡೆದಿದೆ.
ಇಲ್ಲಿನ ವಿನಾಯಕಪುರಂ ನಿವಾಸಿ ದಿನೇಶ್ ಚೆನ್ನೈನ (Chennai) ತಿರು ಪೋರೂರಿನ ಕಂದಸ್ವಾಮಿ ದೇಗುಲಕ್ಕೆ (Thiruporur Kandaswamy Temple) ಕಳೆದ ತಿಂಗಳು ಭೇಟಿ ನೀಡಿದ್ದರು. ಈ ವೇಳೆ ಹುಂಡಿಗೆ ಹಣ ಹಾಕುವ ಸಂದರ್ಭದಲ್ಲಿ ಆಕಸ್ಮಿಕ ಐಫೋನ್ ಕೂಡ ಹುಂಡಿಗೆ ಬಿದ್ದಿತ್ತು. ದೇವಸ್ಥಾನ ಆಡಳಿತ ಮಂಡಳಿಯವರನನ್ನ ಕೇಳಿದಾಗ ಹುಂಡಿಗೆ ಹಾಕಿದ ಮೇಲೆ ಮರಳಿಸುವುದಿಲ್ಲ ಎಂದಿದ್ದಾರೆ.ಇದನ್ನೂ ಓದಿ: Punjab | ಮೊಹಾಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಮಹಿಳೆ ಸಾವು – ಸಿಎಂ ಭಗವಂತ್ ಮಾನ್ ಕಂಬನಿ
ಈ ಕುರಿತು ದಿನೇಶ್ ಅಧಿಕಾರಿಗಳಿಗೆ ದೂರು ನೀಡಿದ್ದು, ಶುಕ್ರವಾರ (ಡಿ.20) ರಂದು ಅಧಿಕಾರಿಗಳು ಹುಂಡಿ ಓಪನ್ ಮಾಡಿಸಿದ್ದಾರೆ. ಈ ವೇಳೆ ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದವರು ಮೊಬೈಲ್‌ನಲ್ಲಿರುವ ಡೇಟಾವನ್ನು ಕೊಡುತ್ತೇವೆ. ಐಫೋನ್ ನೀಡುವುದಿಲ್ಲ. ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಫೋನ್ ಕೊಡಲು ನಿರಾಕರಿಸಿದ್ದಾರೆ.
ಐಫೋನ್ ಬೇಕು ಎಂದಿರುವ ದಿನೇಶ್, ಡೇಟಾ ಮಾತ್ರ ಸ್ವೀಕಾರ ಮಾಡಲು ನಿರಾಕರಿಸಿ, ಬರಿಗೈಯಲ್ಲಿ ವಾಪಾಸ್ ಹೋಗಿರುವ ಘಟನೆ ನಡೆದಿದೆ.ಇದನ್ನೂ ಓದಿ: Bengaluru| ಓವರ್‌ಟೇಕ್ ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಕಾರು ಡಿಕ್ಕಿ – ಮೂವರು ಗಂಭೀರ