ಕ್ಯಾಲಿಫೋರ್ನಿಯಾ: ಬೈಕ್‍ಗಳಲ್ಲಿ ಐಫೋನ್‍ಗಳನ್ನು ಬಳಸಬೇಡಿ ಆಪಲ್ ಕಂಪನಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಪ್ರಯಾಣದ ವೇಳೆ ನಿಖರವಾಗಿ ಜಾಗ ತಿಳಿಯಲು ಸವಾರರು ಹ್ಯಾಂಡಲ್ ನಲ್ಲಿ ಫೋನ್ ಇಡುವುದು ಸಾಮಾನ್ಯ. ಈ ರೀತಿ ಬಳಕೆ ಮಾಡಿ ಅತಿಯಾದ ಕಂಪನಕ್ಕೆ(ವೈಬ್ರೆಷನ್) ಐಫೋನ್ ಸದಾ ಸಿಲುಕುತ್ತಿದ್ದರೆ ಕ್ಯಾಮೆರಾಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆಪಲ್ ಹೇಳಿದೆ.
ಆಪಲ್ ಏನು ಹೇಳಿದೆ?
ಹೊಸ ಐಫೋನ್ ಮಾದರಿಗಳಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನ ಮತ್ತು ಲೂಪ್ ಆಟೋಫೋಕಸ್ ಅನ್ನು ಬಳಸಲಾಗಿದೆ. ಫೋಟೋ, ವಿಡಿಯೋ ತೆಗೆಯುವ ವೇಳೆ ಕೈ ಶೇಕ್ ಆದರೂ, ಸರಿಯಾದ ಫ್ರೇಮ್ ಹೊಂದಿಸಲು ಸಾಧ್ಯವಾಗದೇ ಇದ್ದರೂ ಈ ತಂತ್ರಜ್ಞಾನದಿಂದ ಫೋಟೋ, ವಿಡಿಯೋಗಳು ಬಹಳ ಚೆನ್ನಾಗಿ ಮೂಡಿಬರುತ್ತದೆ. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್
ಐಫೋನ್ ಹೆಚ್ಚಾಗಿ ಗರಿಷ್ಠ ಕಂಪನಕ್ಕೆ ಸಿಲುಕಿದರೆ ಕ್ಯಾಮೆರಾಕ್ಕೆ ನೀಡಲಾಗಿರುವ ತಂತ್ರಜ್ಞಾನಕ್ಕೆ ಹಾನಿಯಾಗಿ ಫೋಟೋ, ವಿಡಿಯೋ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಕಂಪನ ಹೊಂದಿರುವ ಗರಿಷ್ಠ ಸಿಸಿ ಸಾಮರ್ಥ್ಯದ ಮೋಟಾರ್ ಬೈಕ್, ಇತರ ಯಂತ್ರ, ವಾಹನಗಳಲ್ಲಿ ಅಳವಡಿಸಿದರೆ ಐಫೋನ್ ಕ್ಯಾಮೆರಾದ ವಿನ್ಯಾಸಕ್ಕೆ ಧಕ್ಕೆಯಾಗಬಹುದು.
ಕಂಪನ ತಡೆಯುವ ಸ್ಟ್ಯಾಂಡ್, ಮೌಂಟ್ ಬಳಸುವುದರಿಂದ ಕ್ಯಾಮರಾಗೆ ಹಾನಿಯಾಗುವುದನ್ನು ತಡೆಯಬಹುದು ಎಂದು ಸಲಹೆಯನ್ನು ಆಪಲ್ ನೀಡಿದೆ. ಆದರೂ ಆದರೆ ದೀರ್ಘಾವಧಿಯ ಐಫೋನ್ ಸುರಕ್ಷತೆಗಾಗಿ ದ್ವಿಚಕ್ರ ವಾಹನದಲ್ಲಿ ಐಫೋನ್ ಅಳವಡಿಸದೇ ಇರುವುದು ಉತ್ತಮ ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು