ನವದೆಹಲಿ: ಕಡಿಮೆ ಬೆಲೆಯಲ್ಲಿ ಐಫೋನ್ 7 ಮಾರಾಟವಾಗುವ 33 ದೇಶಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ಸಿಕ್ಕಿದೆ.
ಅಮೆರಿಕದಲ್ಲಿ 128 ಜಿಬಿ ಆಂತರಿಕ ಮೆಮೊರಿಯ ಐಫೋನಿಗೆ 815 ಡಾಲರ್(ಅಂದಾಜು 52,400 ರೂ.) ಇದ್ದರೆ, ಭಾರತದಲ್ಲಿ 902 ಡಾಲರ್(ಅಂದಾಜು 58,000 ರೂ.) ಇದೆ.
Advertisement
ಜಪಾನ್ ನಲ್ಲಿ ಅಮೆರಿಕದ ದರದಲ್ಲೇ ಐಫೋನ್ ಸಿಗುತ್ತಿದ್ದು, ಹಾಂಕಾಂಗ್ ನಲ್ಲಿ 821 ಡಾಲರ್ ಇದೆ. ಚೀನಾದಲ್ಲಿ 899 ಡಾಲರ್, ಆಸ್ಟ್ರೇಲಿಯಾದಲ್ಲಿ 926 ಡಾಲರ್, ಫ್ರಾನ್ಸ್ ನಲ್ಲಿ 962 ಡಾಲರ್, ಇಟಲಿಯಲ್ಲಿ 995 ಡಾಲರ್ ಇದೆ.
Advertisement
ಅತಿ ಹೆಚ್ಚು ದರ ದರ: ಪೋಲಂಡ್ ನಲ್ಲಿ 1,005 ಡಾಲರ್, ಗ್ರೀಸ್ ನಲ್ಲಿ 1,028 ಡಾಲರ್, ರಷ್ಯಾದಲ್ಲಿ 1,086 ಡಾಲರ್, ಬ್ರೆಜಿಲ್ 1,115 ಡಾಲರ್, ಟರ್ಕಿ ಯಲ್ಲಿ 1,200 ಡಾಲರ್ ಬೆಲೆಗೆ ಐಫೋನ್7 ಮಾರಾಟವಾಗುತ್ತಿದೆ.
Advertisement
Deutsche ಬ್ಯಾಂಕ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡಾಲರ್ ಮುಂದೆ ಆಯಾ ದೇಶಗಳ ಕರೆನ್ಸಿ ದರ ಮತ್ತು ತೆರಿಗೆಯಿಂದ ಐಫೋನ್ ದರ ಬದಲಾಗಿದೆ ಎಂದು ತಿಳಿಸಿದೆ.
Advertisement
ಆಪಲ್ ಐಫೋನ್ 7 ಗುಣ ವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ: ಸಿಂಗಲ್ ನ್ಯಾನೋ ಸಿಮ್, 138.3*67.1*7.1 ಮಿ.ಮೀ ಗಾತ್ರ, 138 ಗ್ರಾಂ ತೂಕ, 707 ಇಂಚಿನ ಎಲ್‍ಇಡಿ ಬ್ಯಾಕ್‍ಲಿಟ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(750*1334 ಪಿಕ್ಸೆಲ್,326 ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ: ಐಓಎಸ್ 10, ಆಪಲ್ ಎ10 ಕ್ವಾಡ್ ಕೋರ್ 2.34 GHz ಪ್ರೊಸೆಸರ್, ಪವರ್‍ವಿಆರ್ ಸಿರೀಸ್ 7ಎಕ್ಸ್‍ಟಿ ಪ್ಲಸ್ ಗ್ರಾಫಿಕ್ ಪ್ರೊಸೆಸರ್
ಮೆಮೊರಿ ಮತ್ತು ಕ್ಯಾಮೆರಾ: ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 32/128/256 ಜಿಬಿ ಆಂತರಿಕ ಮೆಮೊರಿ, 2ಜಿಬಿ ರಾಮ್ 12 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 7 ಎಂಪಿ ಕ್ಯಾಮೆರಾ
ಇತರೇ: ಫಿಂಗರ್ ಪ್ರಿಂಟ್ ಸೆನ್ಸರ್, 1960 ಎಂಎಚ್ ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ