ವಿಜಯಪುರ: ಪಿಯು ಪರೀಕ್ಷಾ (PUC Exam) ಕೇಂದ್ರದಲ್ಲಿ ವಿಶೇಷ ಮೇಲ್ವಿಚಾರಕಿ (Invigilator) ಎಡವಟ್ಟು ಮಾಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಕೊಂಡೊಯ್ದು, ಸೆಲ್ಫಿ ಕ್ಲಿಕ್ಕಿಸಿ (Selfie) ಎಡವಟ್ಟು ಮಾಡಿದ್ದಾರೆ.
ವಿಜಯಪುರ (Vijayapura) ಜಿಲ್ಲೆ ಸಿಂದಗಿ ತಾಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಿಂದಗಿ ಸಮಾಜ ಕಲ್ಯಾಣ ಇಲಾಖೆ ಎಡಿ ನಿರ್ಮಲಾ ಭೂಸಗೊಂಡ ಪರೀಕ್ಷೆ ಮೇಲ್ವಿಚಾರಣೆ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೆಂಟಲ್ ಹಾಸ್ಪಿಟಲ್ ಕ್ಯಾಂಡಿಡೇಟ್ ಬಗ್ಗೆ ನಾನು ಮಾತನಾಡಲು ಹೋಗಲ್ಲ: ಡಿಕೆಶಿ
ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ನಿರ್ಮಲಾ ಸ್ಪೆಷಲ್ ಅಬ್ಸರ್ವರ್ ಆಗಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆ ಸ್ಮಾರ್ಟ್ಪೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ನಂತರ ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದಾರೆ.
ನಿರ್ಮಲಾ ಕ್ಲಿಕ್ಕಿಸಿರುವ ಸೆಲ್ಫಿ ಸಮಾಜ ಕಲ್ಯಾಣ ಇಲಾಖೆ ಗ್ರೂಪ್‌ಗೂ ಶೇರ್ ಮಾಡಲಾಗಿದೆ. ಮೇಲ್ವಿಚಾರಕಿ ಪರೀಕ್ಷಾ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅವರಿಗೆ ನೋಟಿಸ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ: ಡಿಕೆಶಿಗೆ ಜಾರಕಿಹೊಳಿ ಟಾಂಗ್