ಕೆರೆಬೇಟೆ (Kerebete) ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಗಮನ ಸೆಳೆದಿರುವ ಸಿನಿಮಾ. ಚಿತ್ರದ ಟೀಸರ್ ಮತ್ತು ಹಾಡುಗಳನ್ನ ನೋಡಿದವರು ಕೆರೆಬೇಟೆ ನೋಡಲಿಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಈ ಚಿತ್ರಕ್ಕೆ ಕೋಟಿಗೊಬ್ಬ ಕಿಚ್ಚನ (Sudeep) ಸಪೋರ್ಟ್ ಸಿಗ್ತಿದೆ. ಹೌದು, ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಕೆರೆಬೇಟೆ ಟ್ರೈಲರ್ (Trailer) ರಿಲೀಸ್ ಮಾಡೋದಕ್ಕೆ ಒಪ್ಕೊಂಡಿದ್ದಾರೆ. ಇದೇ ಫೆಬ್ರವರಿ 20ರಂದು ರಾತ್ರಿ 7 ಗಂಟೆಗೆ ಕೆರೆಬೇಟೆ ಟ್ರೈಲರ್ ಅನಾವರಣಗೊಳ್ತಿದೆ.
‘ಕೆರೆಬೇಟೆ’ ನಿರ್ದೇಶಕ ರಾಜ್ ಗುರು ಕೈಚಳದಲ್ಲಿ ತಯಾರಾಗಿರುವ ಚಿತ್ರ. ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ನಾಯಕನಟನಾಗಿ ಮಿಂಚಿದ್ದ ಗೌರಿಶಂಕರ್ (Gauri Shankar) ಈಗ ʻಕೆರೆಬೇಟೆʼ ಮೂಲಕ ನಾಯಕನಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷಗಿಳಿದಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಚಂದನವನಕ್ಕೆ ಪರಿಚಯಗೊಳ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಮಲೆನಾಡ ಗೊಂಬೆ ಹಾಡಲ್ಲಿ ಬಿಂದು-ಗೌರಿಶಂಕರ್ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ಸಾಂಗ್ ರಿಲೀಸ್ ಮಾಡ್ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಪತ್, ಗೋಪಾಲ ದೇಶ್‌ಪಾಂಡೆ, ನಟಿ ಹರಿಣಿ ಸೇರಿದಂತೆ ಇನ್ನಿತರರಿಂದ ಕೂಡಿರುವ ಕೆರೆಬೇಟೆ ಯಶಸ್ವಿಯಾಗಲೆಂದು ಹಾರೈಸಿದ್ದರು.
ವಿಶೇಷ ಅಂದರೆ ಕೆರೆಬೇಟೆ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಸಾಥ್ ಸಿಕ್ಕಿದೆ. ಈ ಹಿಂದೆ ಡಾಲಿ ಧನಂಜಯ್, ದಿನಕರ್ ತೂಗುದೀಪ್ ಸೇರಿದಂತೆ ಹಲವರು ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ದರು. ನೆಲದ ಕಥೆಗಳನ್ನ ನಮ್ಮ ನಾಡಿನ ಜನರು ಯಾವತ್ತೂ ಕೈ ಬಿಟ್ಟಿಲ್ಲ ಸೋ ಮಲೆನಾಡ ಮಣ್ಣಿನ ಸೊಗಡಿರುವ ಈ ಚಿತ್ರವನ್ನು ಕೈ ಬಿಡಲ್ಲವೆಂದು ಹಾರೈಸಿದ್ದರು. ಅವರೆಲ್ಲರ ಹಾರೈಕೆಯ ಜತೆಗೆ ಅದ್ದೂರಿಯಾಗಿಯೇ ತಯಾರಾಗಿರುವ ಕೆರೆಬೇಟೆ ಚಿತ್ರ ಬಿಡುಗಡೆಗೆ ಅಣಿಯಾಗಿದೆ.
ಇದೇ ಮಾರ್ಚ್ 15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡ್ತಿದೆ. ಗಗನ್ ಬಡೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ ಸಿನಿಮಾಗಿದೆ. ಜೈ ಶಂಕರ್ ಪಟೇಲ್‌ಮತ್ತು ಗೌರಿಶಂಕರ್ ಜಂಟಿಯಾಗಿ ಜನಮನ ಸಿನಿಮಾಸ್ ಬ್ಯಾನರ್‌ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ. ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.