ವಿಜಯ ರಾಘವೇಂದ್ರ ನಾಯಕನಾಗಿ ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ರಿಲೀಸ್ ಗೆ ತಯಾರಾಗಿದೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರವನ್ನು ಸುಹಾಸ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಒಂದು ಹಾಡು ಮತ್ತು ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಖುಷಿಯಲ್ಲಿ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಈ ತಿಂಗಳು ಕೊನೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ಹೊರಟಿದೆ.
Advertisement
ಚಿನ್ನಾರಿಮುತ್ತ ಮೂಲಕ ಬಾಲನಟನಾಗಿ ಎಂಟ್ರಿ ಕೊಟ್ಟು, ಆ ನಂತರ ನಾನಾ ಚಿತ್ರಗಳಲ್ಲಿ ನಟಿಸಿದವರು ವಿಜಯ್ ರಾಘವೇಂದ್ರ (Vijay Raghavendra). ಇತ್ತೀಚಿನ ವರ್ಷಗಳಲ್ಲಂತೂ ಅವರನ್ನು ಹೊಸ ಹೊಸ ಕಥೆಗಳು ಹುಡುಕಿಕೊಂಡು ಬಂದಿವೆ. ಸೈಕಾಲಾಜಿಕಲ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಮೂರು ಶೇಡ್ ಇರುವಂತಹ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಖ್ಯಾತ ಬರಹಗಾರನ ಪಾತ್ರವಂತೆ.
Advertisement
Advertisement
ಲುಕ್ ಸೇರಿದಂತೆ ಈವರೆಗೂ ಎಲ್ಲಿಯೂ ಕಾಣಿಸದೇ ಇರುವಂತ ವಿಜಯ್ ರಾಘವೇಂದ್ರ ಅವರನ್ನು ಈ ಸಿನಿಮಾದಲ್ಲಿ ನೋಡಬಹುದು ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಈಗಾಗಲೇ ತೆಲುಗು ಸಿನಿಮಾವೊಂದರಲ್ಲಿ ನಟಿಸಿ, ಶಿವಾಜಿ ಸುರತ್ಕಲ್, ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಮುಂತಾದ ಸಿನಿಮಾಗಳ ಮೂಲಕ ಒಂದಷ್ಟು ಹೆಸರು ಮಾಡಿರುವ ನಮ್ರತಾ ಸುರೇಂದ್ರನಾಥ್ (Namrata Surendranath) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ನಟನೆಯ ‘ಸ್ಪಾರ್ಕ್ ಲೈಫ್’ ಟೀಸರ್ ರಿಲೀಸ್
Advertisement
ನಿರ್ದೇಶಕನಾಗಿಯೂ ಹೆಸರು ಮಾಡಿರುವ ರಾಘು ಶಿವಮೊಗ್ಗ ಪಬ್ಲಿಷರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಮಗಳ ಪಾತ್ರದಲ್ಲಿ ಬೇಬಿ ಆರಾಧ್ಯ ನಟಿಸಿದ್ದಾಳೆ. ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ಕುಮಾರ್ ನೆಗೆಟಿವ್ ಶೇಡಿನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ಮಾತ್ರವಲ್ಲದೇ, ಸ್ಕ್ರೀನ್ ಪ್ಲೇ ವಿಚಾರದಲ್ಲಿಯೂ ಕದ್ದಚಿತ್ರ ಖಡಕ್ಕಾಗಿದೆ. ಸೆಕೆಂಡ್ ಹಾಫ್‍ನಲ್ಲಿ ಪ್ಯಾರಲೆಲ್ ಮೆಥೆಡ್ಡಿನ ಸ್ಕ್ರೀನ್ ಪ್ಲೇ ಮೂಲಕ ದೃಶ್ಯಗಳು ಚಲಿಸಲಿವೆ. ಸಿಂಗಲ್ ಟೇಕ್‍ನಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಲಾಗಿದೆಯಂತೆ.
ಎ.ಎಸ್ ಮೂರ್ತಿ ಸಾರಥ್ಯದ ಅಭಿನಯ ತರಂಗದಲ್ಲಿ ನಟನೆ, ನಿರ್ದೇಶನ ಸೇರಿದಂತೆ ಒಂದಷ್ಟು ಪ್ರಕಾರಗಳಲ್ಲಿ ಪಳಗಿಕೊಂಡಿರುವವರು ನಿರ್ದೇಶಕ ಸುಹಾಸ್ ಕೃಷ್ಣ(Suhas Krishna). ಹಾಗೆ ಎರಡ್ಮೂರು ವರ್ಷ ರಂಗಭೂಮಿಯಲ್ಲಿ ಪಳಗಿಕೊಂಡಿದ್ದ ಸುಹಾಸ್ ಆ ಬಳಿಕ, ರವಿ ಶ್ರೀವತ್ಸ, ಸಾಯಿ ಕೃಷ್ಣ, ಅರವಿಂದ್ ಕೌಶಿಕ್, ರಾಘು ಶಿವಮೊಗ್ಗ ಮುಂತಾದ ನಿರ್ದೇಶಕರ ಜೊತೆಗೂ ಕೆಲಸ ಮಾಡಿ ಅನುಭವ ಪಡೆದವರು. ಇದೀಗ ಕದ್ದ ಚಿತ್ರದ ಮೂಲಕ ಸ್ವತಂತ್ರ ನರ್ದೇಶಕರಾಗಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಗೌತಮ್ ಮನು ಸಂಕಲನ, ಸ್ಟೀಫನ್ ಕೊರಿಯೋಗ್ರಫಿ, ದುಷ್ಯಂತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
Web Stories