ಶಿವಮೊಗ್ಗ: ಶಂಕಿತ ಉಗ್ರರ (Suspect Terrorist) ಬಂಧನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಶಂಕಿತ ಉಗ್ರರಿಗೆ ಐಸಿಸ್ (ISIS) ಜೊತೆ ಮಾತ್ರವಲ್ಲ, ಲಷ್ಕರ್ ಸಂಘಟನೆ ಜೊತೆಯೂ ನಂಟಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
Advertisement
ಪ್ರೇಮ್‍ಸಿಂಗ್‍ಗೆ ಚಾಕು ಹಾಕಿದ್ದ ಜಬೀವುಲ್ಲಾ ಸಹ ಇದೇ ಗ್ಯಾಂಗ್‍ಗೆ ಸೇರಿದವನು. ಜಬಿವುಲ್ಲಾಗೆ ಲಷ್ಕರ್ ಸಂಪರ್ಕ ಇದೆ. ಎಲ್ಲರೂ ಸೇರ್ಕೋಂಡು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ರು ಎಂದು ಎಡಿಜಿಜಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇವರಿಗೆಲ್ಲಾ ಅರಾಫತ್ ಎಂಬಾತ ವಿದೇಶದಲ್ಲಿದ್ದುಕೊಂಡು ಗೈಡ್ ಮಾಡ್ತಿದ್ದ. ಅರಾಫತ್ ಸೂಚನೆ ಮೇಲೆ ಯಾಸಿನ್ ಪುರಲೆ ಸಮೀಪದ ತುಂಗಾ ತೀರದಲ್ಲಿ ಸ್ಫೋಟದ ಟ್ರಯಲ್ ಮಾಡ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಯಾಸಿನ್ (Yasin) ಜೊತೆಗೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್ ಬ್ಲ್ಯಾಸ್ಟ್ ಕಥೆ
Advertisement
Advertisement
ಸ್ಥಳದಲ್ಲಿ ಸ್ಫೋಟಕ್ಕೆ ಬಳಸಿದ ವೈರ್ ಗಳು ಪತ್ತೆಯಾಗಿವೆ. ಇನ್ನೋರ್ವ ಆರೋಪಿ ಮಾಜ್‍ನನ್ನು ಬಂಟ್ವಾಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗ್ತಿದೆ. ಇನ್ನು, ಪರಾರಿಯಲ್ಲಿರೊ ಶಾರಿಕ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಲೆನಾಡಿನಲ್ಲಿ ಐಸಿಸ್ ಜಾಲ ವಿಸ್ತರಿಸುವ ಹೊಣೆ ಹೊತ್ತಿದ್ದ ಶಾರಿಕ್, ಯಾಸಿನ್ ಮತ್ತು ಮಾಜ್ ಬ್ರೈನ್‍ವಾಶ್ ಮಾಡಿದ್ದ. ಇವರಿದ್ದ ಗ್ರೂಪ್‍ಗಳಲ್ಲಿ 100ಕ್ಕೂ ಹೆಚ್ಚು ಜನ ಇದ್ರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು
Advertisement
ಇದೀಗ ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ತನಿಖಾ ದಳ ಎಂಟ್ರಿ ಕೊಟ್ಟಿದೆ. ಶಂಕಿತರ ಮೇಲೆ ಎಫ್‍ಐಆರ್ ಆಗ್ತಿದ್ದಂತೆ ಎನ್‍ಐಎ ಅಧಿಕಾರಿಗಳು ಪ್ರಕರಣದ ಪೂರ್ವಪರ ಸಂಗ್ರಹಿಸಿದ್ದಾರೆ. ಯುಎಪಿಎಯಡಿ ಕೇಸ್ ದಾಖಲಾಗಿರೋ ಕಾರಣ ಈ ಪ್ರಕರಣ ತನ್ನಿಂತಾನೆ ಎನ್‍ಐಎ (NIA) ಗೆ ವರ್ಗಾವಣೆ ಆಗಲಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್ ಗ್ಯಾಂಗ್ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್ಐಆರ್