ಬೆಂಗಳೂರು: ಇಂದು ‘ಅಂತರಾಷ್ಟ್ರೀಯ ಯೋಗ ದಿನ’. ಎಲ್ಲಕಡೆ ಯೋಗ ಮಾಡುವ ವಾತಾವರಣ ಸೃಷ್ಟಿಯಾಗಿದ್ದು, ನಾಡಿನ ಹಲವು ಜನರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿಯೂ ರಾಜಕಾರಣಿಗಳು, ಸೆಲೆಬ್ರಿಟಿಗಳು ಯೋಗ ದಿನದ ಶುಭ ಕೋರುವ ಮೂಲಕ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.
ಕೂ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ರಾಜ್ಯದ ಜನರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ‘ಮಾನವೀಯತೆಗಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಜಗತ್ತಿನೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿದೆ. ಬೆಂಗಳೂರು ನಿವಾಸದಲ್ಲಿ ಇಂದು ಯೋಗಾಭ್ಯಾಸ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ: ಅದಿತಿ ಪ್ರಭುದೇವ
Advertisement
Advertisement
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಹ ಕೂ ಮಾಡಿದ್ದು, ಯೋಗವು ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ಅಂತರಾಷ್ಟ್ರೀಯ ಯೋಗ ದಿನದಂದು, ಮಾನವಕುಲದ ಸುಧಾರಣೆಗಾಗಿ ಈ ಕಾಲಾತೀತ ಜ್ಞಾನವನ್ನು ಪಡೆದುಕೊಳ್ಳಲು ಪ್ರತಿಜ್ಞೆ ಮಾಡೋಣ ಎಂದು ಮನವಿ ಮಾಡಿದ್ದಾರೆ.
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯಪೂರ್ಣ ಶರೀರ ಮತ್ತು ಮನಸ್ಸಿನ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ ಎಂದಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಯೋಗ ನಮ್ಮ ಹೆಮ್ಮೆಯ ಪರಂಪರೆ. ಸನ್ಮಾನ್ಯ ಪ್ರಧಾನಿ @narendramodi ಅವರ ದಿಟ್ಟ ಪ್ರಯತ್ನದಿಂದ ಯೋಗಕ್ಕೆ ಇಂದು ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ದೇಹ ಹಾಗೂ ಮನಸ್ಸನ್ನು ಕೇಂದ್ರೀಕರಿಸಿ ಶಿಸ್ತಿನ ಪಾಠ ಹೇಳುವ ಯೋಗ ಕುರಿತು ಜಾಗೃತಿ ಹೆಚ್ಚಿಸೋಣ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗದಿನದ ಶುಭಾಶಯಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ತಂದೆಯೊಂದಿಗಿನ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಸ್ಕ್ ತೃತೀಯ ಲಿಂಗಿ ಮಗಳು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯೋಗದ ಶ್ಲೋಕವನ್ನು ಕೂ ಮಾಡುವ ಮೂಲಕ ಜನರಿಗೆ ಯೋಗ ದಿನದ ಶುಭಕೋರಿದ್ದಾರೆ.
ಯೋಗೇನ ಚಿತ್ತಸ್ಯ ಪದೇನ ವಾಚಂ |
ಮಲಂ ಶರೀರಸ್ಯ ಚ ವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಂ |
ಪತಂಜಲಿಂ ಪ್ರಾಂಜಲಿರಾನ ತೋಸ್ಮಿ ||
ಪತಂಜಲಿ ಮಹಾಮುನಿಗಳಿಂದ ರಚನೆಯಾದ ಜಗತ್ತಿನ ಅತ್ಯುತ್ತಮ ವಿದ್ಯೆ ಯೋಗಶಾಸ್ತ್ರ. ಭಾರತದ ಈ ಪುರಾತನ ವಿದ್ಯೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಗತ್ತಿಗೆ ಯೋಗದಿನಾಚರಣೆಯನ್ನ ಪರಿಚಯಿಸಿದ ಕೀರ್ತಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಸರ್ವರಿಗೂ ಯೋಗದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.