ಬೆಂಗಳೂರು: ಅಂತರರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಗೆ, ನೀತಿ ಪಾಠ, ಕಾನೂನು ಸಲಹೆ, ಸಂಚಾರಿ ನಿಯಮಗಳ ಬಗ್ಗೆ ಶಾಲಾ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಥಾಮಸ್ ಮೆಮೋರಿಯಲ್ ಶಾಲೆಯಲ್ಲಿ, ಪಟ್ಟಣ ಪಿಎಸ್‍ಐ ಮಂಜುನಾಥ್ ಜಾಗೃತಿ ಮೂಡಿಸಿ ಕಾರ್ಯಕ್ರಮ ನಡೆಸಿದ್ದು, ಮಕ್ಕಳ ಭಾವನೆಗೆ ತಕ್ಕಂತೆ ಮನೆಯಲ್ಲಿ ತಂದೆ ತಾಯಿಯ ಪಾತ್ರ, ಶಾಲೆಯಲ್ಲಿ ಶಿಕ್ಷಕರ ಪಾತ್ರ, ಹೊರಗಡೆ ಸ್ನೇಹಿತ, ಸಾರ್ವಜನಿಕರ ಪಾತ್ರ ಬಹುಮುಖ್ಯವಾದದ್ದು. ಈ ಎಲ್ಲಾ ಪಾತ್ರಗಳಲ್ಲಿ ಒಂದರಲ್ಲಿ ನ್ಯೂನತೆ ಎದುರಾದರೆ ಆ ಮಕ್ಕಳ ಭವಿಷ್ಯಕ್ಕೆ ಕುತ್ತು ಎದುರಾಗಲಿದೆ. ಅಲ್ಲದೆ ಆ ಮಕ್ಕಳು ಕೆಟ್ಟ ಚಟಗಳ ಕಡೆ ಗಮನವರಿಸುವುದು ಸಾಮಾನ್ಯ. ಹೀಗಾಗಿ ಓದಿನ ಜೊತೆ ಸಂಬಂಧಗಳ ಪಾತ್ರ ಅಷ್ಟೇ ಮುಖ್ಯವಾದದ್ದು ಎಂದು ಪಿಎಸ್‍ಐ ಮಂಜುನಾಥ್ ಅವರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
Advertisement
Advertisement
ಸತತ ಒಂದು ಗಂಟೆಗಳ ಕಾಲ ಶಾಲಾ ಮಕ್ಕಳಿಗೆ ಅರಿವಿನ ಜಾಗೃತಿಯನ್ನ ಮೂಡಿಸಿದ ಪೊಲೀಸರು. ಬಳಿಕ ಜೊತೆಗೆ ಮಕ್ಕಳ ಜೊತೆ ತಾವು ಕೂಡ ಪ್ರಮಾಣ ಮಾಡುವ ಮೂಲಕ, ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದರು.