ಸುಕೇಶ್ ಚಂದ್ರಶೇಖರ್ ಮಾಡಿದ್ದಾರೆ ಎನ್ನಲಾದ 200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandes) ಸತತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದರು. ಜಾರಿ ನಿರ್ದೇಶನಾಲಯದ (Directorate of Enforcement) ಅಧಿಕಾರಿಗಳಿಗೆ ಕೋರ್ಟಿಗೆ ಸಲ್ಲಿಸಿರುವ ಚಾರ್ಜಶೀಟ್ ನಲ್ಲಿ ಜಾಕ್ವೆಲಿನ್ ಹೆಸರು ಕೂಡ ಇತ್ತು. ಹೀಗಾಗಿ ಬಂಧನದ ಭೀತಿಯೂ ಅವರಿಗಿತ್ತು. ಹಾಗಾಗಿಯೇ ಜಾಮೀನಿಗಾಗಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಅವರಿಗೆ ಮಧ್ಯಂತರ ಜಾಮೀನು ದೊರೆಕಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ.
Advertisement
ತಮಗೆ ಮಧ್ಯಂತರ ಜಾಮೀನು (Bail) ಸಿಗುತ್ತಿದ್ದಂತೆಯೇ ನಿಟ್ಟುಸಿರಿಟ್ಟಿರುವ ಜಾಕ್ವೆಲಿನ್, ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎನ್ನುವುದನ್ನು ಆಧಾರ ಸಹಿತ ಕೋರ್ಟ್ ಗೆ ಸಾಬೀತು ಪಡಿಸಬೇಕಾಗಿದೆ. ಅಲ್ಲದೇ, ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದರಿಂದ ಜಾಕ್ವೆಲಿನ್ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ