ಮುಂಬೈ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಯಶಸ್ಸಿನ ಹಿಂದೆ ಅಂಡರ್ ವೇರ್ ಇತ್ತು ಎಂದು ಹೇಳಿಕೊಂಡಿದ್ದಾರೆ. ಆ ಚಡ್ಡಿ ಧರಿಸಿ ಆಡುತ್ತಿದ್ದಾಗ ನಾನು ವಿಕೆಟ್ ಪಡೆಯುತ್ತಲೇ ಇದ್ದೆ ಎಂದು ತನ್ನ ಕ್ರಿಕೆಟ್ ಬಾಳ್ವೆಯ ಸ್ವಾರಸ್ಯಕರವಾದ ಅಂಶವನ್ನು ಹೊರ ಹಾಕಿದ್ದಾರೆ.
ಸದ್ಯ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣದ ಮೂಲಕ ನಿರಂತರವಾಗಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಅವರು ಭಾಗವಹಿಸಿದ್ದ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಜೀವನದ ಕೆಲ ಇನ್‍ಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದು, ಈ ವೇಳೆ ಲಕ್ಕಿ ಅಂಡರ್ ವೇರ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
Advertisement
Advertisement
ನನ್ನ ಬಳಿ ಲಕ್ಕಿ ಅಂಡರ್ ವೇರ್ ಒಂದಿತ್ತು. ಅದನ್ನು ಧರಿಸಿ ನಾನು ಪಂದ್ಯ ಆಡಿದಾಗ ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಇದು ನನಗೂ ಆಶ್ಚರ್ಯ ಮೂಡಿಸಿತ್ತು. ಆದರೆ ಈಗ ನನ್ನ ಬಳಿ ಆ ಒಳ ಉಡುಪು ಇಲ್ಲ. ಒಂದು ಬಾರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಅದನ್ನು ಉಪಯೋಗಿಸುವುದಕ್ಕೆ ಆಗದ ಸ್ಥಿತಿಗೆ ತಲುಪಿತ್ತು. ಹಲವು ಬಾರಿ ಧರಿಸಿದ್ದ ಕಾರಣ ಅದು ಹರಿದು ಹೋಗಿತ್ತು. ಆ ಚಡ್ಡಿ ಇದ್ದಿದ್ದರೆ ಇನ್ನಷ್ಟು ವಿಕೆಟ್ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.
Advertisement
ಹರ್ಭಜನ್ ಅವರು 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಏಕದಿನ ಕ್ರಿಕೆಟ್ ನಲ್ಲಿ 236 ಪಂದ್ಯಗಳಿಂದ 269 ವಿಕೆಟ್ ಹಾಗು ಟೆಸ್ಟ್ ಕ್ರಿಕೆಟ್ ನಲ್ಲಿ 103 ಪಂದ್ಯ ಆಡಿ ಹರ್ಭಜನ್ 417 ವಿಕೆಟ್ ಕಬಳಿಸಿದ್ದಾರೆ. ಉಳಿದಂತೆ 28 ಟಿ20 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದಾರೆ.
Advertisement
How did we get to tractors ???? and ripped undies?! ???????? anything can happen with @harbhajan_singh is in the house. Hear now on #nofilterneha season 3 on @saavn co produced by @BigGirlPvtLtd .. listen up here ???????????? https://t.co/mYeAihPw5W pic.twitter.com/yuOX2GO7b7
— Neha Dhupia (@NehaDhupia) December 3, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv