ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಎಂದ ಕೂಡಲೇ ಸಿಟ್ಟು, ಸೆಡವಿನ ವ್ಯಕ್ತಿ ಎಂಬ ಭಾವನೆ ಇದೆ. ಆದರೆ ಅವರೊಬ್ಬ ಭಾವುಕ ಜೀವಿಯೂ ಹೌದು!. ಅವರ ಬದುಕಿನ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಮೊದಲ ಬಾರಿ ಕಣ್ಣೀರು!
ಸಿದ್ದರಾಮಯ್ಯ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಣ್ಣೀರು ಹಾಕಿದ್ದು 2008 ರಲ್ಲಿ! ಅವರು ಸುದೀರ್ಘವಾಗಿ ಪ್ರತಿನಿಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರ ವಿಭಜನೆಯಾಗಿ ವರುಣಾ ಸೃಷ್ಟಿಯಾಯಿತು. ಆಗ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ಹೋಗುವುದು ಹೇಗೆ? ಎಂಬ ಕರಳುಬಳ್ಳಿಯ ಸಂಬಂಧ ಅವರನ್ನು ಕಾಡಿತು. ಯಾವಾಗಲೂ ಕೋಪಿಸಿಕೊಳ್ಳುವ, ರೇಗುವ, ಎದೆ ಉಬ್ಬಿಸಿಕೊಂಡು, ಕಾಲು ಕುಣಿಸಿಕೊಂಡೇ ಮಾತನಾಡುವ, ತಪ್ಪು ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುವ ಸಿದ್ದರಾಮಯ್ಯ ಇದೇ ಕಾರಣಕ್ಕಾಗಿ 2008ರ ಚುನಾವಣೆಯ ವೇಳೆಗೆ ಅಕ್ಷರಶಃ ಕಣ್ಣೀರು ಹಾಕಿದರು. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕ್ಷೇತ್ರವನ್ನು ಕಾರ್ಯಕರ್ತರನ್ನು ಬಿಟ್ಟು ಹೋಗಬೇಕಲ್ಲ ಎಂದು ಭಾವೋದ್ವೇಗಕ್ಕೆ ಒಳಗಾಗಿ ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದರು! ಅಲ್ಲಿಯವರೆಗೆ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದನ್ನು ಯಾರೂ ನೋಡಿರಲಿಲ್ಲ. ಇದನ್ನೂ ಓದಿ: ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೀನಿ: ಈಶ್ವರಪ್ಪಗೆ ಬಿಜೆಪಿ MLC ಆಯನೂರು ಮಂಜುನಾಥ್ ಸವಾಲ್
Advertisement
Advertisement
ವೀರಮಕ್ಕಳ ಕುಣಿತ ಅಂದ್ರೆ ಇಷ್ಟ
ಸಿದ್ದರಾಮಯ್ಯ ಅವರಿಗೆ ವೀರಮಕ್ಕಳ ಕುಣಿತ ಅಂದ್ರೆ ಇಷ್ಟ. ಸಿದ್ದರಾಮಯ್ಯ ಅವರು ಪ್ರತಿವರ್ಷ ಸ್ವಗ್ರಾಮ ಸಿದ್ದರಾಮನಹುಂಡಿಗೆ ಭೇಟಿ ಕೊಡುತ್ತಾರೆ. ಗ್ರಾಮದಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಹೆಜ್ಜೆ ಹಾಕುತ್ತಾರೆ.
Advertisement
ವೆಸ್ಪಾ ಸ್ಕೂಟರ್ ರೈಡರ್
ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪಕ್ಷದ ವತಿಯಿಂದ ಯಾವುದೇ ಬೈಕ್ ರ‍್ಯಾಲಿ ಇದ್ದರೂ ವೆಸ್ಪಾ ಓಡಿಸುತ್ತಾರೆ. ಊರಿನಲ್ಲಿ ಮತದಾನಕ್ಕೆ ಹೋದಾಗಲೂ ಕೂಡ ಸ್ಕೂಟರ್ ಓಡಿಸಿದ್ದರು. ಇದನ್ನೂ ಓದಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲೆ FIR ದಾಖಲು
Advertisement
ದೋಸೆ, ಬೋಂಡಾ, ಸಾಂಬರ್ ಅಂದ್ರೆ ಪಂಚಪ್ರಾಣ
ಮೈಸೂರಿಗೆ ಸಿದ್ದರಾಮಯ್ಯ ಬಂದಾಗಲೆಲ್ಲಾ ಕಾಸ್ಟೋಪಾಲಿಟನ್ ಕ್ಲಬ್‌ಗೆ ಹೊಂದಿಕೊಂಡಂತಿದ್ದ ರಮ್ಯಾ ಹೋಟೆಲ್‌ಗೆ ಭೇಟಿ ನೀಡುತ್ತಿದ್ದರು. ಮಸಾಲೆ ದೋಸೆ, ಬೋಂಡಾ- ಸಾಂಬರ್ ತಿಂದು ಕಾಫಿ ಕುಡಿಯುತ್ತಾರೆ. (ಈಗ ರಮ್ಯಾ ಹೋಟೆಲ್ ಮುಚ್ಚಿ ಹೋಗಿದೆ).
ನಾನ್‌ವೆಜ್ ಪ್ರಿಯ
ಸಿದ್ದರಾಮಯ್ಯ ನಾನ್‌ವೆಜ್ ಪ್ರಿಯರು. ಚಾಮಂಡೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕ್ಷೇತ್ರ ಪ್ರವಾಸ ಹೊರಟರೆ ಮಧ್ಯಾಹ್ನ ನಾನ್‌ವೆಜ್ ಊಟ ಗ್ಯಾರಂಟಿ. ಆಗ ಬೆಳ್ಳಂಬೆಳಗ್ಗೆ ಉಪಾಹಾರಕ್ಕೆ ಇಡ್ಲಿ, ಬೋಟಿ, ನಾಟಿಕೋಳಿ ಮಾಡಿಸುವುದು ಉಂಟು! ಈಗ ನಾನ್‌ವೆಜ್ ಕಡಿಮೆ ಮಾಡಿದ್ದೇನೆ ಅಂತಾ ಅವರೇ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಕಳ ಅಖಾಡದಲ್ಲಿ ಮುಟ್ಟಾಳ ಫೈಟ್- ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಕೌಂಟರ್
ಸ್ನೇಹಿತರ ಜೊತೆ ಕಾರ್ಡ್ಸ್
ಸಿದ್ದರಾಮಯ್ಯ ಬೇಜಾರಾದಾಗ ಕಾಲ ಕಳೆಯಲು ಸ್ನೇಹಿತರೊಂದಿಗೆ ಕಾರ್ಡ್ ಕೂಡ ಆಡುತ್ತಾರೆ. ತಮ್ಮ ಆಪ್ತ ಬಳಗದ ಜೊತೆಗೆ ಪ್ರವಾಸಕ್ಕೆ ಹೋದಾಗ ಅಥವಾ ಮೈಸೂರಿನ ಹೊರವಲಯದ ಮನೆಯಲ್ಲಿ ಉಳಿದಾಗ ಕೆಲವೇ ಕೆಲವು ಆಪ್ತರ ಜೊತೆ ಸೇರಿ ಕಾರ್ಡ್ಸ್ ಆಡುತ್ತಾರೆ.