ಪ್ರಪಂಚದ ಏಳು ಅದ್ಭುತಗಳಲ್ಲಿ (Wonders Of The World) ಒಂದಾದ ಚೀನಾದ ಗೋಡೆಯು (Great Wall of China) ತನ್ನ ಅಗಾಧವಾದ ಉದ್ದ ಮತ್ತು ದೃಢತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಮಹಾಗೋಡೆಗೆ 2,300 ವರ್ಷಗಳ ಇತಿಹಾಸವಿದೆ. ಇದರ ನಿರ್ಮಾಣ ಕಾರ್ಯ ಕ್ರಿ.ಪೂ 770-476 ರಲ್ಲಿ ಆಗಿದೆ. ಬಳಿಕ ಮಿಂಗ್ ರಾಜವಂಶ (ಕ್ರಿ.ಶ 1368-1644) ಕೊನೆಯದಾಗಿ ಮರು ನಿರ್ಮಾಣ ಕಾರ್ಯ ಮಾಡಿತು.
ಈ ಗೋಡೆಯು ಚೀನಾದ (China) ಹುಯಿರೋ ಪ್ರಾಂತ್ಯದಲ್ಲಿದೆ. ಯಾವುದೇ ಆಧುನಿಕ ಯಂತ್ರೋಪಕರಣಗಳಿಲ್ಲದೆ ಅತ್ಯಂತ ಬೃಹತ್ ಮತ್ತು ಬಲವಾಗಿ ನಿರ್ಮಿಸಲಾದ ವಿಶ್ವದ ಏಕೈಕ ಪ್ರಾಚೀನ ಗೋಡೆ ಇದಾಗಿದೆ. ಈ ಮಹಾಗೋಡೆಯ ಒಟ್ಟು ಉದ್ದವು ಸುಮಾರು 21,196 ಕಿಲೋಮೀಟರ್ (13,171 ಮೈಲುಗಳು) ಆಗಿದೆ. ಮಿಂಗ್ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಗೋಡೆಯು ಅತ್ಯಂತ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಭಾಗವಾಗಿದೆ. ಇದು ಸುಮಾರು 8,850 ಕಿಲೋಮೀಟರ್ (5,499 ಮೈಲುಗಳು) ಉದ್ದವಾಗಿದೆ. ಈ ಗೋಡೆಯಲ್ಲಿ ಹಲವೆಡೆ ಮಿನಾರ್‍ಗಳನ್ನು ನಿರ್ಮಿಸಲಾಗಿದೆ. ಇದರಿಂದ ದೂರದಲ್ಲಿ ಬರುವ ಯಾವುದೇ ಶತ್ರುಗಳನ್ನು ಸುಲಭವಾಗಿ ಗಮನಿಸಬಹುದು. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್ ಪಕ್ಕಾ!
Advertisement
Advertisement
ಮಿಂಗ್ ರಾಜವಂಶದ (1368-1644) ಅವಧಿಯಲ್ಲಿ ಚೀನಾ ಮಿಲಿಟರಿ ಶಕ್ತಿ ಹೆಚ್ಚಾಯಿತು. ಉತ್ತರದ ಆಕ್ರಮಣವನ್ನು ತಡೆಗಟ್ಟಲು 100 ವರ್ಷಗಳ ಯೋಜನೆಯಲ್ಲಿ ಗ್ರೇಟ್ ವಾಲ್‍ನ್ನು ವ್ಯವಸ್ಥಿತವಾಗಿ ಮರುನಿರ್ಮಿಸಲಾಯಿತು. ಹೆಚ್ಚಿನ ಮಹಾಗೋಡೆಯ ಭಾಗಗಳನ್ನು ಮಿಂಗ್ ರಾಜವಂಶದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿಯೇ ಇದನ್ನು ಮಿಂಗ್ ಗ್ರೇಟ್ ವಾಲ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ನಾವು ನೋಡುತ್ತಿರುವ ಚೀನಾದ ಮಹಾಗೋಡೆಯನ್ನು ಸುಮಾರು 1474 ರಲ್ಲಿ ನಿರ್ಮಿಸಿದ್ದಾಗಿದೆ.
Advertisement
ಈ ಗೋಡೆಯನ್ನು ನಿರ್ಮಿಸಲು 2000 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ಗೋಡೆಯು ವಿಶ್ವದ ಅತಿ ದೊಡ್ಡ ಮಾನವ ನಿರ್ಮಿತ ಗೋಡೆಯಾಗಿದೆ. ಈ ಮಹಾಗೋಡೆಯ ಎತ್ತರ ಕೆಲವೆಡೆ 9 ಅಡಿ ಹಾಗೂ ಕೆಲವೆಡೆ 35 ಅಡಿ ಎತ್ತರವಿದೆ. ಚೀನಾವನ್ನು ಬೇರೆ ಸಾಮ್ರಾಜ್ಯದಿಂದ ಸುರಕ್ಷಿತವಾಗಿರಿಸಲು ಈ ಗೋಡೆಯನ್ನು ನಿರ್ಮಿಸಲಾಯಿತು.
Advertisement
1960-70ರ ದಶಕದಲ್ಲಿ ಈ ಗೋಡೆಯ ಬಹಳಷ್ಟು ಇಟ್ಟಿಗೆಗಳನ್ನು ಕದ್ದು ಮಾರಾಟ ಮಾಡುವ ಮೂಲಕ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದರು. ಇದರಿಂದ ಸರ್ಕಾರವು ಈ ರೀತಿಯ ಕಳ್ಳತನ ಮತ್ತು ಕಳ್ಳಸಾಗಣೆಗೆ ಕಠಿಣ ನಿಯಮಗಳನ್ನು ವಿಧಿಸಿತು. 1970 ರ ನಂತರ ಸಾಮಾನ್ಯ ಪ್ರವಾಸಿಗರಿಗೆ ಗೋಡೆಯನ್ನು ಸಾರ್ವಜನಿಕವಾಗಿ ತೆರೆಯಲಾಯಿತು. ಈ ಮಹಾಗೋಡೆಯ ವಿಶಿಷ್ಟತೆಯ ಕಾರಣಕ್ಕೆ 1987 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು.
ಸುಮಾರು ಒಂದು ಮಿಲಿಯನ್ ಜನರು ಇದರ ನಿರ್ಮಾಣದಲ್ಲಿ ಮೃತಪಟ್ಟಿದ್ದಾರೆ. ಇದೇ ಕಾರಣದಿಂದ ಈ ಗೋಡೆಯನ್ನು ವಿಶ್ವದ ಅತಿದೊಡ್ಡ ಸ್ಮಶಾನ ಎಂದೂ ಕರೆಯುತ್ತಾರೆ.
ಪ್ರತಿ ವರ್ಷ ಸುಮಾರು 1 ಕೋಟಿಗೂ ಹೆಚ್ಚು ಪ್ರವಾಸಿಗರು ಈ ಗೋಡೆಯನ್ನು ನೋಡಲು ಬರುತ್ತಾರೆ. ವಿಶ್ವದಾದ್ಯಂತದ 400 ಕ್ಕೂ ಹೆಚ್ಚು ಪ್ರಸಿದ್ಧ ನಾಯಕರು ಇಲ್ಲಿಗೆ ಭೇಟಿ ನೀಡಿದ್ದಾರೆ. 10 ಜನ ಗೋಡೆಯ ಮೇಲೆ ಒಟ್ಟಿಗೆ ನಡೆಯಬಹುದಾದಷ್ಟು ವಿಶಾಲವಾಗಿದೆ. ಬಾಹ್ಯಾಕಾಶದಿಂದಲೂ ಈ ಗೋಡೆ ಕಾಣುತ್ತದೆ ಎಂಬ ವದಂತಿಗಳಿವೆ ಆದರೆ ಇದಕ್ಕೆ ನಿಖರವಾದ ಪುರಾವೆಗಳಿಲ್ಲ. ಕೆಲವರು ಈ ವಿಚಾರವನ್ನು ಅಲ್ಲಗಳೆದಿದ್ದಾರೆ. ಇದನ್ನೂ ಓದಿ: ಜಗತ್ತು ಕಂಡ ಭೀಕರ ಹಡಗು ದುರಂತಗಳು
Web Stories