ಬೆಂಗಳೂರು: ನಗರದ ಕುಮಾರಪಾರ್ಕ್ (Kumarapark) ಬಳಿ ನಾಪತ್ತೆಯಾಗಿರುವ 3 ಬೀದಿ ನಾಯಿಗಳಿಗಾಗಿ (Stray Dog) ಭಾರೀ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದ ನಾಯಿಗಳ ಪತ್ತೆಗೆ 4 ತಂಡಗಳಿಂದ ತೀವ್ರ ಶೋಧ ನಡೆಸಲಾಗುತ್ತಿದೆ. ನಾಪತ್ತೆಯಾದ ನಾಯಿಗಳನ್ನು ಹುಡುಕಿ ಕೊಟ್ಟವರಿಗೆ ಬರೋಬ್ಬರಿ 35 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
Advertisement
ಹೌದು, ಕುಮಾರಪಾರ್ಕ್ ಬಳಿ ಕಳೆದ 10 ವರ್ಷದಿಂದ ಇದ್ದ ಈ 3 ಬೀದಿ ನಾಯಿಗಳನ್ನು ವಕೀಲೆ ವಿಪ್ಲವಿ ಮಹೇಂದ್ರ ಅವರು ಪೋಷಣೆ ಮಾಡುತ್ತಿದ್ದರು. ಸದ್ಯ ವಿಪ್ಲವಿ ಮಹೇಂದ್ರ ಇಂಗ್ಲೆಂಡ್‌ನಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಕಚೇರಿ ಸಿಬ್ಬಂದಿಯಿಂದ ನಾಯಿಗಳ ಪೋಷಣೆ ಮಾಡಲಾಗುತ್ತಿತ್ತು. ವಿಶೇಷವೆಂದರೆ ಈ 3 ನಾಯಿಗಳಿಂದ ಈ ಪ್ರದೇಶದಲ್ಲಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಅಕ್ಟೋಬರ್ 4 ರಿಂದ 20 ರ ನಡುವೆ ಲೋಬಿ, ದಂತ, ರಿಬಾ ಹೆಸರಿನ ಈ 3 ನಾಯಿಗಳು ಕಣ್ಮರೆಯಾಗಿವೆ. ಇದನ್ನೂ ಓದಿ: ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ರೂ. ನಾಮ – ವಂಚಿತರಿಂದ ಜ್ಯೋತಿಷಿಯ ಕಿಡ್ನಾಪ್
Advertisement
ಕಾಣೆಯಾದ ಬೀದಿ ನಾಯಿಗಳಿಗಾಗಿ ಭಾರೀ ಶೋಧ:
ಇದೀಗ ಕಣ್ಮರೆಯಾಗಿರುವ 3 ಬೀದಿ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಚೇರಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ. ಕಾಣೆಯಾದ ನಾಯಿಗಳ ಪತ್ತೆಗೆ 4 ತಂಡಗಳಿಂದ ಶೋಧ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಪೋಷಣೆ ಮಾಡುತ್ತಿದ್ದ ವಿಪ್ಲವಿ ಮಹೇಂದ್ರ ಅವರಿಂದಲೂ ಪ್ರತ್ಯೇಕ ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ. ಒಂದೊಂದು ತಂಡದಲ್ಲಿ ಇಬ್ಬರು ವ್ಯಕ್ತಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
Advertisement
Advertisement
ಪ್ರತಿ ದಿನ 11 ಗಂಟೆಗಳ ಕಾಲ ನಾಯಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಟೀಂಗಳು ಮೆಜೆಸ್ಟಿಕ್ ಸುತ್ತಮುತ್ತ 2 ದಿನ, ಗೂಡ್ಸ್ ಶೆಡ್ ರಸ್ತೆಯಲ್ಲಿ 3 ದಿನ ಹುಡುಕಾಡಿದೆ. ಕಾಣೆಯಾದ ನಾಯಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿವೆ ಎಂದು ಸ್ಥಳೀಯರು ಫೋಟೋ ಕಳುಹಿಸಿದ್ದರು. ಈ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ವಿದೇಶದಲ್ಲಿರುವ ವಿಪ್ಲವಿ ಮಹೇಂದ್ರ ಕೂಡಾ ಈ ಟೀಂಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು