ಚಿಕ್ಕಮಗಳೂರು | ಡೆತ್‌ನೋಟ್‌ ಬರೆದಿಟ್ಟು ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

Public TV
0 Min Read
An intelligence department constable committed suicide in Chikkamagaluru

ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ (Intelligence Bureau) ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನ ಮಧು (28 ) ಎಂದು ಗುರುತಿಸಲಾಗಿದೆ. ಮೂಲತಃ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದ ಮಧು ಕಳೆದೊಂದು ವರ್ಷದಿಂದ ಶಿವಮೊಗ್ಗದಲ್ಲಿ ಸೇವೆ‌ ಸಲ್ಲಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು.

ತಮ್ಮ ಮನೆಯಲ್ಲೇ ಅನಾರೋಗ್ಯದ ಸಮಸ್ಯೆ ಎಂದು ಚೀಟಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article