ನಟಿ ತ್ರಿಷಾಗೆ ಅವಹೇಳನ ಮಾತು: ಮನ್ಸೂರ್ ಅಲಿ ಖಾನ್ ಗೆ ಕೋರ್ಟ್ ಛೀಮಾರಿ

Public TV
1 Min Read
Mansoor Ali Khan

ಟಿ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.

Mansoor Ali Khan

ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿದೆ ಎಂದು ವರದಿ ಆಗಿದೆ.

mansoor ali khan 1

ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

mansoor ali khan 2

ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.

 

ಇದೀಗ ಖಷ್ಬೂ (Khushboo) ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮನ್ಸೂರ್ ಅಲಿ ಖಾನ್ ನಂತಹ ಕೊಳಕು ಮನಸ್ಥಿತಿಯವರಿಗೆ ಕಾನೂನು ಮೂಲಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಗಂಡಸರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮಾತನಾಡಿದ್ದಾರೆ. ಮತ್ತು ತಾವು ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದ್ದರು. ಇದೀಗ ಮನ್ಸೂರ್ ಕಾನೂನು ಕುಣಿಕೆಯಲ್ಲಿ ತೂಗಾಡುತ್ತಿದ್ದಾರೆ.

Share This Article