LatestLeading NewsMain PostNational

ಮಮತಾ ಬ್ಯಾನರ್ಜಿಗೆ ಸಾಹಿತ್ಯ ಗೌರವ ಸಿಗುತ್ತಿರುವುದು ಅವಮಾನ: ಪ್ರಶಸ್ತಿ ಹಿಂದಿರುಗಿಸಿದ ಲೇಖಕಿ

ಕೋಲ್ಕತ್ತಾ: ಸಾಹಿತ್ಯದ ಕೊಡುಗೆಗಾಗಿ ವಿಶೇಷ ಪ್ರಶಸ್ತಿಯನ್ನು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ನೀಡಲು ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ. ಆದರೆ ಬಂಗಾಳಿ ಲೇಖಕಿ ಮತ್ತು ಜಾನಪದ ಸಂಸ್ಕೃತಿ ಸಂಶೋಧಕಿ ಇದನ್ನು ವಿರೋಧಿಸಿ ತನಗೆ ಬಂದಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

2019 ರಲ್ಲಿ ‘ಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿ’ ರತ್ನಾ ರಶೀದ್ ಬ್ಯಾನರ್ಜಿ ಅವರಿಗೆ ‘ಅನ್ನದ ಶಂಕರ್ ಸ್ಮಾರಕ ಸಮ್ಮಾನ್’ ಪ್ರಶಸ್ತಿ ಕೊಟ್ಟು ಗೌರವಿಸಿತ್ತು. ಆದರೆ ಇದನ್ನು ರತ್ನಾ ರಶೀದ್ ಬ್ಯಾನರ್ಜಿ ಹಿಂದಿರುಗಿಸಿದ್ದಾರೆ. ಈ ಕುರಿತು ರತ್ನಾ ರಶೀದ್ ಅವರು ಶಿಕ್ಷಣ ಸಚಿವೆ ಮತ್ತು ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರಿಗೆ ಪತ್ರ ಬರೆದಿದ್ದು, ರವೀಂದ್ರನಾಥ ಟ್ಯಾಗೋರ್ ಜನ್ಮದಿನದಂದು ಸಿಎಂಗೆ ಹೊಸ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಇದರಿಂದ ನನಗೆ ನೀಡಿರುವ ಪ್ರಶಸ್ತಿ ಮುಳ್ಳಿನ ಕಿರೀಟವಾಗಿ ಪರಿಣಮಿಸಿದೆ. ಅದಕ್ಕೆ ನಾನು ಈ ಪತ್ರವನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

ಸಿಎಂಗೆ ಸಾಹಿತ್ಯ ಪ್ರಶಸ್ತಿ ನೀಡುವ ಕ್ರಮದಿಂದ ಬರಹಗಾರ್ತಿಯಾಗಿ ನನಗೆ ಅವಮಾನವಾಗಿದೆ. ಇದು ಕೆಟ್ಟ ನಿರ್ಧಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬಾಂಗ್ಲಾ ಅಕಾಡೆಮಿ ಟ್ಯಾಗೋರ್ ಅವರ ಜನ್ಮದಿನದ ಹಿನ್ನೆಲೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಅವರು ಆಗಮಸಿದ್ದರು. ಈ ವೇಳೆ ಅಕಾಡೆಮಿಯು ಮಮತಾ ಬ್ಯಾನರ್ಜಿ ಅವರ 900ಕ್ಕೂ ಹೆಚ್ಚು ಕವನ ಸಂಕಲನ ‘ಕಬಿತಾ ಬಿಟನ್’ ಪುಸ್ತಕ ಈ ವರ್ಷ ಅತ್ಯುತ್ತಮ ಪುಸ್ತಕ ಎಂದು ಹೇಳಿ ಪ್ರಶಸ್ತಿ  ಘೋಷಿಸಿತು. ಈ ಕಾರ್ಯಕ್ರಮದಲ್ಲಿ ಸಿಎಂ ಉಪಸ್ಥಿತರಿದ್ದರೂ ಬಸು ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

Ratna Rashid Banerjee Returns Award As Mamata Banerjee Gets Literary Honour

ರತ್ನಾ ರಶೀದ್ ಬ್ಯಾನರ್ಜಿ ಅವರು 30ಕ್ಕೂ ಹೆಚ್ಚು ಲೇಖನಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರು ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ಒಳಗೊಂಡಂತೆ ಜಾನಪದ ಸಂಸ್ಕೃತಿಯ ಕುರಿತು ಸಂಶೋಧನಾ ಕಾರ್ಯಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ 

2020ರ ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಮಮತಾ ಬ್ಯಾನರ್ಜಿ ಅವರ ‘ಕಬಿತಾ ಬಿಟಾನ್’  ಕವನ ಸಂಕಲನ ಬಿಡುಗಡೆಯಾಗಿತ್ತು.

Leave a Reply

Your email address will not be published.

Back to top button