ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ಮತ್ತು ನಾಡಧ್ವಜವನ್ನು ತೆರುವುಗೊಳಿಸಿರುವ ಟಿಟಿಡಿ ನಡೆಗೆ ಕರ್ನಾಟಕ ರಾಜ್ಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ದೊಡ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆಗಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
Advertisement
ಕಾರಿನ ಮೇಲಿದ್ದ ಅಪ್ಪು ಫೋಟೋ ಮತ್ತು ನಾಡಧ್ವಜವನ್ನು ತೆಗೆಸುತ್ತಿರುವ ವಿಡಿಯೋ ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಅಕ್ಷರ ರೂಪದ ಪ್ರತಿಭಟನೆಯ ದಾಖಲಿಸಲಾಗುತ್ತಿತ್ತು. ಇದೀಗ ದೇವಸ್ಥಾನಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ
Advertisement
Advertisement
ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ರೀತಿಯಲ್ಲೇ ಆರಾಧಿಸುತ್ತಿದ್ದಾರೆ. ಅವರು ಮಾಡಿದ ಪುಣ್ಯದ ಕೆಲಸಗಳು ದೇವರಿಗೆ ಮಾಡಿದ ಸೇವೆಯಷ್ಟೇ ಪವಿತ್ರವಾಗಿವೆ. ಹೀಗಿದ್ದಾಗಲೂ ಅವರ ಫೋಟೋವನ್ನು ತಗೆದರೆ ಮಾತ್ರ ದೇವಸ್ಥಾನಕ್ಕೆ ಹೋಗಬಹುದು ಎನ್ನುವ ನಡೆ ಸರಿಯಾದದ್ದಲ್ಲ. ಇದನ್ನು ಪ್ರಶ್ನಿಸಿ, ಸ್ಪಷ್ಟನೆಗಾಗಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ.