ದಾವಣಗೆರೆ: ಬಸವ ಜಯಂತಿಯಂದು ಕುಡುಕರ ಸಾಂಗ್ ಹಾಕಿ ಮೆರವಣಿಗೆಯಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ.
Advertisement
ಬಸವ ಜಯಂತಿ ಎಂದರೆ ಶ್ರದ್ಧಾ ಭಕ್ತಿಗಳಿಂದ ಬಸವಣ್ಣನವರ ವಚನಗಳನ್ನು ಅವರ ಅದರ್ಶಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಆದರೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಯ ಮಾಕುಂಟೆ ಗ್ರಾಮದಲ್ಲಿ ಬಸವಣ್ಣನವರಿಗೆ ಅವಮಾನ ಮಾಡುವ ರೀತಿ ಮೆರವಣೆಗೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
Advertisement
ಪ್ರತಿ ವರ್ಷ ಬಸವ ಜಯಂತಿಯಂದು ಗ್ರಾಮದಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರ ಹಿಡಿದು ಮೆರವಣೆಗೆ ಮಾಡುತ್ತಿರುವುದು ವಾಡಿಕೆ. ಆದರೆ ಮಾಕುಂಟೆ ಗ್ರಾಮದ ಮೆರವಣಿಗೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಸಾಂಗ್‍ಗೆ ಬಾಟಲಿ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.
Advertisement
Advertisement
ಗ್ರಾಮದ ಮುಖಂಡರು ಸ್ಥಳದಲ್ಲಿಯೇ ಇದ್ದರೂ ಅದನ್ನು ವಿರೋಧಿಸುವ ಬದಲು ಅವರು ಕೂಡ ಸಂಭ್ರಮಿಸಿದ್ದಾರೆ. ವೀಡಿಯೋಗೆ ಸಾರ್ವಜನಕರಿಂದ ಟೀಕೆ ವ್ಯಕ್ತವಾಗಿದೆ.