ಮತದಾನದ ದಿನ ಬೂತ್ ಮುಖ್ಯದ್ವಾರದಲ್ಲಿ ಮದ್ಯ ಪರೀಕ್ಷೆ ಯಂತ್ರವನ್ನು ಅಳವಡಿಸಿ: ಇಸಿಗೆ ಪತ್ರ

Public TV
2 Min Read
vote

ಬೆಂಗಳೂರು: ಮತದಾನ ಕೇಂದ್ರದ ಪ್ರತಿ ಬೂತ್‍ನ ಮುಖ್ಯದ್ವಾರದಲ್ಲಿ BAC breathalyzer tester ಯಂತ್ರವನ್ನು ಅಳವಡಿಸುವ ಬಗ್ಗೆ ಚಂದ್ರಶೇಖರ್ ಬಿನ್ ಹಾಲಪ್ಪ ಅವರು ಮುಖ್ಯ ಚುನಾವಾಣಾಧಿಕಾರಿಗೆ ಪತ್ರ ಬರೆದಿದ್ದಾರೆ.

BAC breathalyzer tester

ಪತ್ರದಲ್ಲಿ ಏನಿದೆ?
ಮತದಾನ ಕೇಂದ್ರದ ಪ್ರತಿ ಬೂತ್‍ನ ಮುಖ್ಯದ್ವಾರದಲ್ಲಿ BAC breathalyzer tester ಯಂತ್ರವನ್ನು ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ, ಭಾರತ ಚುನಾವಣಾ ಆಯೋಗವು ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಗಳನ್ನು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ನೀತಿ ಸಂಹಿತೆ ಮೂಲಕ ಕ್ರಮಕೈಗೊಳ್ಳುತ್ತದೆ. ಇದನ್ನೂ ಓದಿ:  ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್‌ ಕಾಲೆಳೆದ ಮಸ್ಕ್ 

ಅತಿಮುಖ್ಯವಾಗಿ ಮತದಾನ ಮುಕ್ತಾಯದ ಹಿಂದಿನ 48 ಗಂಟೆ ಅವಧಿಯಲ್ಲಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಮದ್ಯಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು. ಈ ಬಗ್ಗೆ ಆಯೋಗ ಕಟ್ಟು ನಿಟ್ಟು ಕ್ರಮ ಕೈಗೊಂಡರೂ ಸಹ ಅಕ್ರಮವಾಗಿ ಮದ್ಯ ಶೇಖರಿಸಿ ಕಳ್ಳಸಾಗಾಣೆ ಮೂಲಕ ಮತದಾರರಿಗೆ ಮದ್ಯವನ್ನು ಸರಬರಾಜು ಮಾಡುತ್ತಾರೆ. ಇದನ್ನು ತಡೆಗಟ್ಟಲು ಆಯೋಗ ಹೆಚ್ಚು-ಹೆಚ್ಚು ಪೋಲಿಸ್ ಸಿಬ್ಬಂದಿ ಅಧಿಕಾರಿಗಳನ್ನು ನೇಮಿಸುವ ಪರಿಸ್ಥಿತಿ ಇರುತ್ತದೆ.

ALCOHOL 1

ಆದ್ದರಿಂದ ಈ ಅವಸ್ಥೆಯನ್ನು ಸಂಪೂರ್ಣ ತಡೆಗಟ್ಟಲು ‘ಮತದಾನದ ಕೇಂದ್ರದ ಪ್ರತಿ ಬೂತ್ ಪ್ರವೇಶದ್ವಾರದಲ್ಲಿ BAC breathalyzer tester ಯಂತ್ರವನ್ನು ಅಳವಡಿಸಬೇಕು. ಈ ಯಂತ್ರವು ಕಳೆದ 48 ಗಂಟೆಗಳಲ್ಲಿ ಮದ್ಯ ಸೇವಿಸಿದ ಬಗ್ಗೆ ದೃಢೀಕರಿಸುವಂತಿರಬೇಕು. 48 ಗಂಟೆಗಳಲ್ಲಿ(2ದಿನ) ಒಳಗೆ ಮದ್ಯ ಸೇವನೆ ಬಂದವರಿಗೆ ಮತದಾನ ಮಾಡದಂತೆ ಸರ್ಕಾರ ನಿರ್ಬಂಧಿಸಬೇಕು ಈ ರೀತಿ ವ್ಯವಸ್ಥೆ ಮಾಡುವುದರಿಂದ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.

ಕುಡಿದು ಗಲಾಟೆ ಮಡುವವರ ಸಂಖ್ಯೆ ನಿಯಂತ್ರಣವಾಗುತ್ತದೆ. ವಿವೇಚನೆಯಿಂದ ಮತವನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಪ್ರತಿ ಕ್ಷೇತ್ರಗಳಲ್ಲಿ ಉತ್ತಮ ವ್ಯಕ್ತಿಗಳು ಆಯ್ಕೆಯಾಗುತ್ತಾರೆ. ಚುನಾವಣೆಗಳು ಭ್ರಷ್ಟಾಚಾರ ರಹಿತವಾಗಿ ನಡೆಯುತ್ತವೆ. ಇದನ್ನೂ ಓದಿ: ಭ್ರಷ್ಟಾಚಾರ, ದುರಾಡಳಿತದಿಂದ ಬಿಜೆಪಿ ಸರ್ಕಾರ ನಿತ್ಯ ಬೆತ್ತಲೆ ಆಗುತ್ತಿದೆ: ಸಿದ್ದು 

Alcoholic Drink copy

ಭಾರತ ಚುನವಣಾ ಆಯೋಗವು(ECI) ಭಾರತ ಸರ್ಕಾರದ ಕಾನೂನು ನ್ಯಾಯ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ, ಬಿಗಿಯಾದ ಕಾನೂನುಗಳನ್ನು ತರುವ ಮೂಲಕ ನನ್ನ ಅರ್ಜಿಯ ವಿಷಯಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಆಯೋಗ ಈ ಅರ್ಜಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ 30 ದಿನಗಳ ಒಳಗಾಗಿ ಅರ್ಜಿದಾರಿಗೆ ಹಿಂಬರಹ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *