ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

Public TV
2 Min Read
Amandeep Kaur

– ಆಸ್ತಿ ಕಂಡು ಅಧಿಕಾರಿಗಳೇ ದಂಗು

ನವದೆಹಲಿ: ಮಹೀಂದ್ರಾ ಥಾರ್‌ (Mahindra Thar), ರಾಯಲ್‌ ಎನ್‌ಫೀಲ್ಡ್‌ ಬೈಕ್‌, 1 ಕೋಟಿಗೂ ಅಧಿಕ ಮೌಲ್ಯದ ಫ್ಲಾಟ್‌ಗಳು, 2 ಐಫೋನ್‌, ರೋಲೆಕ್ಸ್‌ ವಾಚ್‌… ಇದಿಷ್ಟೂ ಯಾವುದೋ ರಿಯಲ್‌ ಎಸ್ಟೇಟ್‌ ಉದ್ಯಮಿಯ ಆಸ್ತಿಯಲ್ಲ. ಬದಲಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಓಳಗಾಗಿರುವ ಓರ್ವ ಲೇಡಿ ಕಾನ್‌ಸ್ಟೇಬಲ್‌ಗೆ (constable) ಸೇರಿದ ಆಸ್ತಿಯಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಮಾದಕ ದ್ರವ್ಯ ಹೊಂದಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಅಮನ್‌ದೀಪ್‌ ಕೌರ್‌ (Amandeep Kaur ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಗೆ ಆರೋಪದ ಮೇಲೆ ಪಂಜಾಬ್‌ ವಿಜಿಲೆನ್ಸ್‌ ಬ್ಯೂರೋ ಅವರನ್ನು ಸೋಮವಾರ ಬಂಧಿಸಿದೆ. ನಂತರ ಬಟಿಂಡಾ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.

Amandeep Kaur 2

ಕಳೆದ ಏಪ್ರಿಲ್‌ನಲ್ಲಿ 17.71 ಗ್ರಾಂ ಹೆರಾಯಿನ್‌ ಸಾಗಿಸಿದ್ದಕ್ಕಾಗಿ ಕೌರ್‌ ಅವರನ್ನ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಂಧಿಸಿತ್ತು. ಬಳಿಕ ಅವರನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಆದ್ರೆ ಇದೇ ಮೇ 2ರಂದು ಬಟಿಂಡಾದ ನ್ಯಾಯಾಲಯವು ಕೌರ್‌ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿರುವ ಪಂಜಾಬ್‌ ವಿಜಿಲೆನ್ಸ್‌ (Punjab Vigilance Bureau) ಕೌರ್‌ಗೆ ಸೇರಿದ 1.35 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 2 ಫ್ಲಾಟ್‌ಗಳು, 1 ಮಹೀಂದ್ರಾ ಥಾರ್‌, 1 ರೋಲೆಕ್ಸ್‌ ವಾಚ್‌, ಮೂರು ಐಫೋನ್‌ಗಳೂ ಸೇರಿವೆ.

Amandeep Kaur 3

ವಶಪಡಿಸಿಕೊಂಡ ಆಸ್ತಿಗಳು ಎಷ್ಟಿವೆ?
* ವಿರಾಟ್ ಗ್ರೀನ್, ಬಟಿಂಡಾದಲ್ಲಿರುವ ಭೂಮಿ (217 ಚದರ ಗಜಗಳು): 99,00,000 ರೂ. ಮೌಲ್ಯ
* ಡ್ರೀಮ್ ಸಿಟಿ, ಬಟಿಂಡಾದಲ್ಲಿರುವ ಭೂಮಿ (120.83 ಚದರ ಗಜಗಳು): ರೂ 18,12,000
* ಥಾರ್ ಕಾರ್: ರೂ 14,00,000
* ರಾಯಲ್ ಎನ್‌ಫೀಲ್ಡ್ ಬುಲೆಟ್: ರೂ 1,70,000
* ಐಫೋನ್ 13 ಪ್ರೊ ಮ್ಯಾಕ್ಸ್: ರೂ 45,000
* ಐಫೋನ್ ಎಸ್‌ಇ: ರೂ 9,000
* ವಿವೋ ಫೋನ್: ರೂ 2,000
* ಬ್ಯಾಂಕ್ ಬ್ಯಾಲೆನ್ಸ್ (ಎಸ್‌ಬಿಐ): ರೂ 1,01,588.53
* ರೋಲೆಕ್ಸ್ ವಾಚ್: ಬೆಲೆ ತಿಳಿದಿಲ್ಲ

ಅಮನ್‌ದೀಪ್ ಕೌರ್ 2018 ಮತ್ತು 2024ರ ನಡುವೆ ಒಟ್ಟು 1.08,37,550 ರೂ. ಆದಾಯ ಹೊಂದಿದ್ದರು. ಆದರೆ ಅವರ ಖರ್ಚು 1,39,64,802.97 ರೂ.ಗಳಾಗಿತ್ತು. ಇದು ಅವರ ಆದಾಯ ಮೂಲಕ್ಕಿಂತ 31,27,252.97 ರೂ. ಹೆಚ್ಚಾಗಿತ್ತು. ಈ ಹಿನ್ನೆಲೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗಿತ್ತು.

Share This Article