ನವದೆಹಲಿ: ಬಾಲಿವುಡ್ ಸಿನಿಮಾವೊಂದರ ಪ್ರೇರಣೆ ಪಡೆದ 17 ವರ್ಷದ ಹುಡುಗನೊಬ್ಬ ವಿಕಲಚೇತನ ಯುವಕನನ್ನು ಕೊಂದಿರುವ ಘಟನೆ ದಕ್ಷಿಣ ದೆಹಲಿಯ ಸಫ್ದರ್‍ಜಂಗ್ ಪ್ರದೇಶದಲ್ಲಿ ನಡೆದಿದೆ.
ಪೋಷಕರು ದೇವಾಲಯಕ್ಕೆ ತೆರಳಿದ್ದಾಗ ವಿಕಲ ಚೇತನ ಯುವಕ, ಹುಡುಗ ಕಳ್ಳತನ ಮಾಡುತ್ತಿರುವುದನ್ನು ಕಂಡು ಕೂಗಾಡಲು ಪ್ರಯತ್ನಿಸಿದ್ದರಿಂದ ಆತನನ್ನು ಕೊಲ್ಲಲಾಗಿದೆ. ಬಾಲಿವುಡ್ ಚಲನಚಿತ್ರ ತು ಚೋರ್ ಮೈನ್ ಸಿಪಾಹಿಯಿಂದ ಪ್ರೇರಣೆ ಪಡೆದು ಆರೋಪಿ ಹತ್ಯೆಗೈದಿದ್ದಾನೆ. ಅಲ್ಲದೇ ಸಿನಿಮಾದಲ್ಲಿ ತೋರಿಸಿದ್ದಂತೆ ಕಪ್ಪು ಬಣ್ಣದ ಗ್ಲೋಬ್ಸ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಮಗಾರಿ ಉದ್ಘಾಟನೆ ವೇಳೆ ಎಡವಟ್ಟು – ಜನರ ನೂಕುನುಗ್ಗಲಿನಿಂದ ಹೈರಾಣಾದ ಶ್ರೀರಾಮುಲು
- Advertisement
- Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಯುವಕನ ಸಹೋದರಿ, ನನ್ನ ಪೋಷಕರು ಮತ್ತು ಅಜ್ಜಿ ದೇವಸ್ಥಾನಕ್ಕೆ ಹೋಗಿದ್ದರು. ಒಂದು ಗಂಟೆಯ ಬಳಿಕ ನನ್ನ ವಿಕಲಚೇತನ ಸಹೋದರನನ್ನು ಮೂರು ತಿಂಗಳ ಹಿಂದೆಯಷ್ಟೇ ಮನೆಯ ಕೆಲಸಕ್ಕೆ ಸೇರಿದ್ದ ಯುವಕನಿಗೆ ನೋಡಿಕೊಳ್ಳಲು ತಿಳಿಸಿ, ನಾನು ಗ್ರೀನ್ ಪಾರ್ಕ್ ಮಾರುಕಟ್ಟೆಗೆ ಹೋಗಿದ್ದೆ. ಆದರೆ ಮನೆಗೆ ಹಿಂತಿರುಗಿ ಬಂದಾಗ ನನ್ನ ಸಹೋದರ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು ಮತ್ತು ಮನೆ ಕೆಲಸಗಾರ ಕಾಣೆಯಾಗಿದ್ದನು. ನಂತರ ಮನೆಯನ್ನು ಪರಿಶೀಲಿಸಿದಾಗ ಕೆಲವು ಆಭರಣಗಳು, ಮೊಬೈಲ್ ಫೋನ್ ಮತ್ತು ಸುಮಾರು 40 ಸಾವಿರ ನಗದು ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಹುಡುಗ ಬಿಹಾರದ ಸೀತಾಮರ್ಹಿಯಲ್ಲಿರುವ ತನ್ನ ಹುಟ್ಟೂರಿಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದಾಗ ನವದೆಹಲಿ ರೈಲು ನಿಲ್ದಾಣದಿಂದ ಬಂಧಿಸಿ, ಆತನ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಎಂಟ್ರಿ ಕೊಡಲ್ಲ: ಆರ್.ಅಶೋಕ್
ವಿಚಾರಣೆ ವೇಳೆ ಬಾಲಾಪರಾಧಿ ಪೊಲೀಸರಿಗೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದಾಗ ನನ್ನನ್ನು ಅವಮಾನ ಮಾಡಿದ್ದರು. ಹೀಗಾಗಿ ಕೆಲಸ ಬಿಡಲು ನಿರ್ಧರಿಸಿದ್ದೆ. ಆದರೆ ಹೊರಡುವ ಮೊದಲು ಹಣ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಮನೆಯಲ್ಲಿ ದರೋಡೆ ಮಾಡಲು ಯೋಜಿಸಿದೆ. ಈ ವೇಳೆ ಕಳ್ಳತನ ಮಾಡುತ್ತಿರುವುದನ್ನು ವಿಕಲಾಂಗ ಯುವಕ ನೋಡಿ ಕಿರುಚಾಡಲು ಆರಂಭಿಸಿದ ಹೀಗಾಗಿ ಕೊಲೆ ಮಾಡಿದೆ ಎಂದು ಸತ್ಯ ಬಹಿರಂಗ ಪಡಿಸಿದ್ದಾನೆ.