ಬಳ್ಳಾರಿ: ಕೋಳೂರು ಏತ ನೀರಾವರಿ ಪುನಶ್ಚೇತನ ಕಾಮಗಾರಿ ಉದ್ಘಾಟನೆ ವೇಳೆ ಎಡವಟ್ಟು ನಡೆದಿದೆ. ಜಾಕ್ವೇಲ್‌ನಿಂದ ಕೆಳಗೆ ಇಳಿಯುವ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಸಿಲುಕಿ ಸಚಿವ ಶ್ರೀರಾಮುಲು ಹೈರಾಣಾಗಿದ್ದಾರೆ.
Advertisement
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕೋಳೊರು ಏತ ನೀರಾವರಿ ಪುನಶ್ಚೇತನ ಕಾಮಗಾರಿ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಳ್ಳಾಟ ನೂಕಾಟ ನಡೆಸಿದ್ದಾರೆ. ಜಾಕ್ವೇಲ್ ಕಾಮಗಾರಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಬಂದು ಕಾಮಗಾರಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆಯಲ್ಲಿ ಕಾಮಗಾರಿಯ ಜಾಕ್ವೇಲ್ ಉದ್ಘಾಟನೆ ವೇಳೆ ಶಾಸಕ ಜೆ.ಎನ್ ಗಣೇಶ್ ಬೆಂಬಲಿಗರ ಜೈಕಾರಕ್ಕೆ ಶ್ರೀರಾಮುಲು ಹೈರಾಣಾಗಿದ್ದಾರೆ. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ
Advertisement
Advertisement
ಶ್ರೀರಾಮುಲು ಕಾಲು ಉಳುಕಿಸಿಕೊಂಡು ನೋವಿನಿಂದ ನರಳಿದ್ದಾರೆ. ನಂತರ ನಡೆದ ಸಮಾವೇಶದಲ್ಲಿ ಎಸ್‍ಟಿ ಮೀಸಲಾತಿ ವಿಚಾರವಾಗಿ ಸಚಿವ ರಾಮುಲು ಮತ್ತು ಶಾಸಕ ಜೆ.ಎನ್ ಗಣೇಶ್ ನಡುವೆ ವೇದಿಕೆಯಲ್ಲಿಯೇ ವಾಕ್ಸಮರ ನಡೆದಿದೆ. ಮೀಸಲಾತಿ ವಿಚಾರದಲ್ಲಿ ಯಾರು ಏನೇ ಮಾತಾಡಿದ್ರೂ ಕೂಡಾ ಅಷ್ಟೇ. ನಾನು ನನ್ನ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತನ್ನು ಈಡೇರಿಸುತ್ತೇನೆ. ಶೀಘ್ರದಲ್ಲೇ ಸಿಹಿ ಸುದ್ದಿ ಕೊಟ್ಟೇ ಕೊಡುವೆ ಎಂದು ರಾಮುಲು ಹೇಳಿದ್ರು. ಇದಕ್ಕೆ ತಿರುಗೇಟು ನೀಡಿದ ಜೆ.ಎನ್ ಗಣೇಶ್, ಸಚಿವರು ಮೀಸಲಾತಿ ಕೊಡ್ತೀವಿ ಅಂತಾ ಹತ್ತು ವರ್ಷದಿಂದ ಹೇಳ್ತಿದ್ದಾರೆ. ಒಬ್ಬ ರಾಜಕಾರಣಿ ಒಮ್ಮೆ ಹೇಳಿದ ಮೇಲೆ ಆ ಮಾತು ನಡೆಸಿಕೊಡಬೇಕು. ರಕ್ತದಲ್ಲಿ ಬೇಕಾದ್ರೂ ಬರೆದು ಕೊಡ್ತೀವಿ ಅಂತಾ ಹೇಳಿಕೊಂಡು ಪದೇ ಪದೇ ತಿರುಗಾಡಬೇಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದರೆ ದಂಡ