ಬೆಂಗಳೂರು: ದೂರು ಕೊಡಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬೆಂಗಳೂರಿನ (Bengaluru) ಕೊಡಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ.
ಕೊಡಿಗೆಹಳ್ಳಿ ಠಾಣೆ ರಾಜಣ್ಣ ಅಮಾನತುಗೊಂಡು ಇನ್‌ಸ್ಪೆಕ್ಟರ್. ಯುವತಿಯೊಬ್ಬರು ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಆಕೆಯ ನಂಬರ್ ಪಡೆದು ನಂತರ ಅಸಭ್ಯವಾಗಿ ಚಾಟಿಂಗ್ ಮಾಡಿದ್ದ. ಇದನ್ನೂ ಓದಿ: ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು
Advertisement
Advertisement
ಒಮ್ಮೆ ಯುವತಿಯನ್ನು ಠಾಣೆಗೆ ಕರೆಸಿ ಆಕೆಯ ಕೈಗೆ ಡ್ರೈಫ್ರೂಟ್ಸ್ ಇದ್ದ ಬಾಕ್ಸ್ ಕೊಟ್ಟು ರೂಮಿಗೆ ಕರೆದಿದ್ದ. ಇದರಿಂದ ಬೇಸರಗೊಂಡ ಯುವತಿ ಸಾಕ್ಷಿ ಸಮೇತ ಡಿಸಿಪಿಗೆ ದೂರು ನೀಡಿದ್ದಾರೆ.
Advertisement
ಈ ಬಗ್ಗೆ ಪ್ರಾಥಮಿಕ ತನಿಖೆಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ಆದೇಶಿಸಿದ್ದರು. ಯಲಹಂಕ ಎಸಿಪಿಗೆ ತನಿಖೆಗೆ ಸೂಚಿಸಿದ್ದರು. ನಂತರ ಎಸಿಪಿ ವರದಿಯನ್ನ ಪಡೆದು ಪೊಲೀಸ್ ಕಮಿಷನರ್‌ಗೆ ರವಾನಿಸಿದ್ದರು. ಇದನ್ನೂ ಓದಿ: 18 ವರ್ಷಕ್ಕೂ ಮೊದಲೇ ತಾಯಿಯಂದಿರಾದ 15 ಸಾವಿರ ಹೆಣ್ಮಕ್ಕಳು – ಕಾರಣ ಕೇಳಿದ್ರೆ ಶಾಕ್!
Advertisement
ವರದಿಯನ್ನು ಆಧರಿಸಿ ಇನ್‌ಸ್ಪೆಕ್ಟರ್ ರಾಜಣ್ಣನನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.