ಹುಬ್ಬಳ್ಳಿ: ಹೆಸ್ಕಾಂ (Hescom) ಕಚೇರಿಯಲ್ಲಿ ನಡೆದ ಟೆಂಡರ್ ಗೋಲ್ ಮಾಲ್ ಇದೀಗ ರಾಜಕೀಯ ಬಣ್ಣ ಬಳಿದುಕೊಂಡಿದೆ.
ಅನುಮತಿ ಪಡೆದ ಗುತ್ತಿಗೆದಾರರ (Contractors) ಸಂಘದ ಕೆಲ ಸದಸ್ಯರು ಹೆಸ್ಕಾಂ ಎಂಡಿ ಭಾರತಿ ಹಾಗೂ ತಾಂತ್ರಿಕ ನಿರ್ದೇಶಕ ಶ್ರೀಕಾಂತ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೆಸ್ಕಾಂ ಕಚೇರಿಯಲ್ಲಿ ಟೆಂಡರ್ ಪಾಸ್ ಮಾಡಲು 20 ರಿಂದ 25 ಪರ್ಸೆಂಟ್ ಕಮೀಷನ್ (Commission) ಆರೋಪವನ್ನು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ರುದ್ರೇಶ್, ವಿಜಯಕುಮಾರ್ ಗುಡ್ಡದ ಸೇರಿ ಹಲವರು ಮಾಡಿದ್ದರು. ಈ ಆರೋಪ ಕೇಳಿ ಬರುತ್ತಲೇ ಇಂಧನ ಇಲಾಖೆ ಟೆಂಡರ್ (Energy Department) ಪ್ರಕ್ರಿಯೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತು. ಈ ಆರೋಪ ಮಾಡಿದ ಬೆನ್ನಲ್ಲೆ ಗುತ್ತಿಗೆದಾರ ಮತ್ತೊಂದು ಬಣ ನಿನ್ನೆ ಸುದ್ದಿಗೋಷ್ಠಿ ನಡೆಸಿದವರ ವಿರುದ್ಧ ತೊಡೆ ತಟ್ಟಿದೆ.
Advertisement
Advertisement
ಲಂಚದ ಆರೋಪ ಮಾಡಿದವರು ಈ ಹಿಂದೆ ನಡೆದ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಸೋತಿದ್ದು, ಆ ಕಾರಣಕ್ಕೆ ಈ ಲಂಚದ ಆರೋಪ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಆರಂಭವಾದಾಗ ಮಾತನಾಡದವರು ಇವರು ಇದೀಗ ಯಾಕೆ ಆರೋಪ ಮಾಡಿದ್ದಾರೆ? ಇದಕ್ಕೆಲ್ಲಾ ಕಾರಣ ಸಂಘದ ಚುನಾವಣೆ ಸೋಲು ಎನ್ನುವುದು ಸಿ. ರಮೇಶ್ ಬಣದ ವಾದವಾಗಿದೆ.
Advertisement
Advertisement
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ 472 ಕೋಟಿ ರೂ.ಯ ವಿವಿಧ ಕಾಮಗಾರಿಗಳನ್ನು ಲಂಚ ನೀಡಿದವರಿಗೆ ಮಾತ್ರ ನೀಡಲಾಗಿದೆ ಎಂದು ಆರೋಪ ಮಾಡಿದವರು ಅಸಲಿಗೆ ಹುಬ್ಬಳ್ಳಿ ಅವರು ಅಲ್ಲ ಎನ್ನುವ ಸತ್ಯ ಬೆಳಕಿಗೆ ಬಂದಿದೆ. 15 ವರ್ಷ ಹೆಸ್ಕಾಂನಲ್ಲಿ ಆಡಳಿತ ಮಾಡಿ ಸೋತ ಕಾರಣಕ್ಕೆ ಇಂತಹ ಆರೋಪಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಬೊಮ್ಮಾಯಿ ಬೊಬ್ಬೆ ಹೊಡೆಯುತ್ತಿದ್ದಾರೆ: ನಾಲಿಗೆ ಹರಿಬಿಟ್ಟ ಶಿವಸೇನೆ ಪುಂಡ
ಲಂಚದ ಆರೋಪ ಮಾಡಿದ ಗುತ್ತಿಗೆದಾರರು ಎಲ್2 ಇದ್ದು ಎಲ್1 ಇದ್ದವರಿಗೆ ಟೆಂಡರ್ ನೀಡಲಾಗಿದೆ. ಇವರು ಸುಮ್ಮನೆ ಆರೋಪ ಮಾಡುತ್ತಿದ್ದು, ನಾವು ನಯಾಪೈಸೆ ಕಮಿಷನ್ ಕೊಟ್ಟಿಲ್ಲ ಎನ್ನುವುದು ಟೆಂಡರ್ ಪಡೆದ ಗುತ್ತಿಗೆದಾರರ ಮಾತು.
ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿಯ ನೂರಕ್ಕೂ ಹೆಚ್ಚು ಗುತ್ತಿಗೆದಾರರು 472 ಕೋಟಿ ರೂ. ಟೆಂಡರ್‌ನಲ್ಲಿ ಭಾಗಿಯಾಗಿ ಕಾಮಗಾರಿ ಪಡೆದಿದ್ದಾರೆ. ಈಗ ಏಕಾಏಕಿ ಟೆಂಡರ್ ರದ್ದಾಗಿದ್ದು ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಬಡ್ಡಿಗೆ ಹಣ ಸಾಲ ತಂದು ಟೆಂಡರ್‌ಗೆ ಹಾಕಿದ್ದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವು ಇದನ್ನು ಇಂಧನ ಸಚಿವ ಸುನಿಲ್ ಕುಮಾರ್ ಗಮನಕ್ಕೆ ತರುತ್ತೇವೆ. ಟೆಂಡರ್ ರದ್ದಾದ ಬಗ್ಗೆ ಮತ್ತು ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ನೊಂದ ಗುತ್ತಿಗೆದಾರರು ತಿಳಿಸಿದ್ದಾರೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ