– ದುರಂತಕ್ಕೆ ಕಾರಣವಾಗಿದ್ದು ನೌಕಾದಳದ ನಿರ್ಲಕ್ಷವೇ!
ಕಾರವಾರ: ಸುವರ್ಣ ತ್ರಿಭುಜ ಬೋಟ್‍ಗೆ ನೌಕಾದಳದ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಕ್ಕಿ ಹೊಡೆದಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ.
163 ಮೀಟರ್ ಉದ್ದವಿರುವ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಸೆಂಬರ್ 15ರ ಮಧ್ಯರಾತ್ರಿ ಸುವರ್ಣ ತ್ರಿಭುಜ ಬೋಟ್ ಇದ್ದ ಜಾಗದಲ್ಲಿ ವೇಗವಾಗಿ ಹೋಗಿತ್ತು. ಈ ವೇಳೆ ಬೋಟ್ ಇರುವುದನ್ನು ಗಮನಿಸದ ಐಎನ್‍ಎಸ್ ನೌಕೆಯ ನಾವಿಕ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೌಕಾಸೇನೆಯಿಂದ ಏಳು ಮೀನುಗಾರರ ಕೊಲೆ – ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ
Advertisement
Advertisement
ಐಎನ್‍ಎಸ್ ಕೊಚ್ಚಿನ ಮುಂಭಾಗದ ತಳಭಾಗವು ಡ್ಯಾಮೇಜ್ ಆಗಿತ್ತು. ಅಷ್ಟೇ ಅಲ್ಲದೆ ನೌಕೆಗೆ ಅಳವಡಿಸಿದ್ದ ಕ್ಯಾಮೆರಾ ಸಹ ಸಂಪೂರ್ಣ ಜಖಂಗೊಂಡಿತ್ತು. ನಂತರ ಇದನ್ನು ಮುಂಬೈನ ಶಿಪ್‍ಯಾರ್ಡನಲ್ಲಿ ಸತತ ಮೂರು ತಿಂಗಳ ಕಾಲ ದುರಸ್ತಿಗೊಳಿಸಿ ಬಳಿಕ ಸಮುದ್ರಕ್ಕೆ ಇಳಿಸಲಾಗಿತ್ತು. ಹೀಗಾಗಿ ಸುವರ್ಣ ತ್ರಿಭುಜ ಮುಳುಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ
Advertisement
ಈ ಸಂಬಂಧ ತನಿಖೆ ಕೈಗೊಳ್ಳಬೇಕು. ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆ ಎಲ್ಲಿ? ಯಾವಾಗ ಡ್ಯಾಮೆಜ್ ಆಗಿತ್ತು ಅಂತ ನೌಕಾದಳದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ತನಿಖೆ ಕೈಗೊಂಡಲ್ಲಿ ಸುವರ್ಣ ತ್ರಿಭುಜದ ರಹಸ್ಯ ಬಯಲಾಗಲಿದೆ ಎಂದು ಮೀನುಗಾರರು ಆಗ್ರಹಿಸಿದ್ದಾರೆ.