ಐಎನ್‌ಎಸ್‌ ಬ್ರಹ್ಮಪುತ್ರ ನೌಕೆಯಲ್ಲಿ ಅಗ್ನಿ ದುರಂತ; ಓರ್ವ ಸಿಬ್ಬಂದಿ ನಾಪತ್ತೆ – ಒಂದು ಕಡೆ ವಾಲಿದ ನೌಕೆ

Public TV
1 Min Read
INS Brahmaputra

ಮುಂಬೈ: ಭಾರತೀಯ ನೌಕಾಪಡೆಯ ಯುದ್ಧ ನೌಕೆ ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ (INS Brahmaputra) ಭಾರಿ ಅಗ್ನಿ ಅವಘಡ ಸಂಭವಿಸಿದೆ. ನೌಕೆಯ ಕಿರಿಯ ನಾವಿಕ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಸಲಾಗಿದೆ.

ಮುಂಬೈನ (Mumbai) ನೌಕಾಪಡೆಯ ಡಾಕ್‌ಯಾರ್ಡ್‌ನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಹಡಗು ಒಂದು ಕಡೆ ವಾಲಿದ್ದು, ಸಾಕಷ್ಟು ಹಾನಿಯುಂಟಾಗಿದೆ. ಹಡಗನ್ನು ಸರಿಪಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಮೋದಿ 3.0 ಸರ್ಕಾರದ ಬಜೆಟ್‌ ಮಂಡನೆ ಇಂದು; ತೆರಿಗೆ ಪದ್ಧತಿಯಲ್ಲಿ ಆಗುತ್ತಾ ಬದಲಾವಣೆ?

ಜುಲೈ 21 ರ ಸಂಜೆ ಐಎನ್‌ಎಸ್ ಬ್ರಹ್ಮಪುತ್ರ ಯುದ್ಧನೌಕೆಯ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಇತರ ಹಡಗುಗಳ ಸಿಬ್ಬಂದಿ ನೆರವಿನಿಂದ ಸೋಮವಾರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ದುರಂತದಿಂದ ನೌಕೆ ಒಂದು ಕಡೆ ವಾಲಿದೆ. ಹಡಗನ್ನು ನೇರವಾಗಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ನೀಡಿ: ಸುಧಾಕರ್‌ ಮನವಿ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೂಕ್ತ ಕ್ರಮ ಕೈಗೊಳ್ಳುವಂತೆ ನೌಕಾಪಡೆ ಮುಖ್ಯಸ್ಥ ದಿನೇಶ್ ಕೆ.ತ್ರಿಪಾಠಿ ಅವರಿಗೆ ಸೂಚಿಸಿದ್ದಾರೆ.

Share This Article