ಮೈಸೂರು: ಕೊರೋನಾ ವೈರಸ್ ರೂಪಾಂತರಿ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚುತ್ತಿದ್ದು, ಇದೀಗ ಮೈಸೂರಿ ಪೊಲೀಸರು ಕೊರೋನಾ ನಿಯಂತ್ರಣಕ್ಕೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮೈಸೂರು ಪೊಲೀಸರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಯೋಜಿಸಿದ್ದು, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದೆ ಬರುವವರಿಗೆ ಗುರುತಿನ ಚೀಟಿ ವಿತರಿಸಲಿದ್ದಾರೆ. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್
Advertisement
Advertisement
ಮೈಸೂರಿನ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 200 ಮಂದಿ ಸ್ವಯಂ ಸೇವಕರನ್ನು ನಿಯೋಜನೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಅವರಿಗೆ ಗುರುತಿನ ಚೀಟಿಯನ್ನೂ ವಿತರಿಸಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದ್ದಾರೆ.
Advertisement
ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಈ ಪ್ರಯತ್ನ ಮುಂದುವರಿಯಲಿದ್ದು, ನಂತರದ ದಿನಗಳಲ್ಲಿ ಬೇರೆ ಉದ್ದೇಶಗಳಿಗೂ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ: ರೆಸಾರ್ಟ್ ಮಾಲೀಕರ ಅಕ್ರೋಶ