ChikkamagaluruDistrictsLatestMain Post
ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

ಚಿಕ್ಕಮಗಳೂರು: ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಟಿ ರವಿ ಮತ ಚಲಾಯಿಸಲು ಮತಗಟ್ಟೆಗೆ ತೆರಳುವ ಸಮಯದಲ್ಲಿ ಮಲ್ಲಂದೂರು ರಸ್ತೆ ಉಪ್ಪಳ್ಳಿ ಚಿತಾಗಾರ ಸಮೀಪದ ಯಗಚಿ ನದಿಗೆ ಸೇರುವ ಹಳ್ಳದಲ್ಲಿ ಯುವಕನು ಕಸ ಎಸೆಯುತ್ತಿದ್ದ. ಈ ವೇಳೆ ಕಾರಿನಿಂದ ರವಿಯವರು ಯುವಕನಿಗೆ ರಸ್ತೆ ಮಧ್ಯೆಯೇ ಕ್ಲಾಸ್ ನಡೆದಿದೆ. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ
ಯುವಕನಿಗೆ ಹೊಟ್ಟೆಗೆ ಅನ್ನ ತಿನ್ನತೀಯಾ ಅಥವಾ ಏನು ತಿಂತೀಯಾ? ಎಂದು ಕೇಳಿದ್ದು, ಬೆಳಗ್ಗೆ ಕಸದ ವಿಲೇವಾರಿ ಗಾಡಿ ಬರುತ್ತೇ ಅದಕ್ಕೆ ಹಾಕಲಿಕ್ಕೆ ಏನು ಸಮಸ್ಯೆ? ಯಾರ ಮಗ ನೀನು? ಇನ್ನೊಂದು ಸಾರಿ ನೀನು ಏನಾದರೂ ಇಲ್ಲಿ ಕಸ ಚೆಲ್ಲಿದರೆ ನೋಡು ಎಂದು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ