ಟಯರ್ ಬ್ಲಾಸ್ಟ್- ಆಟೋಗೆ ಇನ್ನೋವಾ ಗುದ್ದಿದ ರಭಸಕ್ಕೆ ಕಾಂಪೌಂಡ್ ಪುಡಿಪುಡಿ

Public TV
1 Min Read
AUTO CAR ACCIDENT

ಬೆಂಗಳೂರು: ಅತಿ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರಿನ ಟಯರ್ ಬ್ಲಾಸ್ಟ್ (Tyre Blast) ಆಗಿ ನೋಡು ನೋಡುತ್ತಿದ್ದಂತೆ ಪಾರ್ಕ್ ಮಾಡಿದ್ದ ಆಟೋಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಮನೆಯ ಕಾಂಪೌಂಡ್ ಪುಡಿ ಪುಡಿ ಆಗಿ ಬಿದ್ದಿದೆ.

ಬೆಂಗಳೂರಿನ ಲಾಲ್‍ಬಾಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಅಪಘಾತದ ಭಯನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಲಿ ರಸ್ತೆಯಲ್ಲಿ ಅತಿ ವೇಗವಾಗಿ ಲಾಲ್‍ಬಾಗ್ ರಸ್ತೆ ಮೂಲಕ ಜಯ ನಗರದ ಕಡೆ ಹೋಗುತ್ತಿದ್ದ ಕಾರ್ ನ ಟಯರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ಕ್ಷಣದಲ್ಲೇ ಯಮ ಸ್ವರೂಪಿಯಂತೆ ಕಾರು ನುಗ್ಗಿದ್ದು, ಕೂದಲೆಳೆ ಅಂತರಲ್ಲಿ ವೃದ್ಧ ಪಾರಾಗಿದ್ದಾರೆ.

ಘಟನೆಯಲ್ಲಿ ಕಾಂಪೌಂಡ್ ನೆಲಕ್ಕುರುಳಿದ್ದು, ಆಟೋ (Innova Car and Auto) ಹಾಗೂ ಕಾರು ಜಖಂಗೊಂಡಿದೆ. ಘಟನೆ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ (VV Puram Traffic Police) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಮದ್ಯ ಸೇವಿಸಲು ಹಣ ಕೊಡದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಾಕಿದ ಪತಿ- ಕೋಮಾಗೆ ಜಾರಿದ ಪತ್ನಿ

ACCIDENT

ಇನ್ನು ಬೆಂಗಳೂರಿನಲ್ಲಿ ಓನ್‍ವೇನಲ್ಲಿ ಬಂದವ ಹಿಟ್ ಅಂಡ್ ರನ್ ಮಾಡಿ ಪರಾರಿ ಆಗಿದ್ದಾನೆ. ಜನವರಿ 26ರಂದು ಬೆಳಗ್ಗೆ 11 ಗಂಟೆಗೆ  ಈ ಘಟನೆ ನಡೆದಿದೆ. ಬಸವೇಶ್ವರ ನಗರದ ಲೇ ಅರೇಬಿಯಾ ಹೋಟೆಲ್ ಬಳಿ ರಸ್ತೆ ದಾಟುತ್ತಿದ ಮಹಿಳೆಗೆ ಗುದ್ದಿದ್ದಾನೆ.. ಮಹಿಳೆ ಒದ್ದಾಡಿದ್ರೂ ಸಹಾಯಕ್ಕೆ ಬಾರದೇ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗಿಳಿದಿದ್ದಾರೆ.

Share This Article