– ಭಾರತದ ತುರ್ತು ವೀಸಾ ಮನವಿಗೆ ಯುಎಸ್ ಒಪ್ಪಿಗೆ
ಮುಂಬೈ: ಅಪಘಾತದಿಂದ ಕೋಮಾ ಸ್ಥಿತಿಯಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿನಿಗೆ ತುರ್ತು ವೀಸಾ ನೀಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ.
Advertisement
ಇದೇ ಫೆ.14 ರಂದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 35 ವರ್ಷದ ನೀಲಂ ಶಿಂಧೆ ಸ್ಥಿತಿ ಗಂಭೀರವಾಗಿದೆ. ಕೋಮಾ ಸ್ಥಿತಿಯಲ್ಲಿರುವ ಆಕೆಯನ್ನು ಭಾರತಕ್ಕೆ ವಾಪಸ್ ಕರೆತರಲು ಮಹಾರಾಷ್ಟ್ರದ ಸತಾರದಲ್ಲಿರುವ ಆಕೆಯ ತಂದೆ ಅಂದಿನಿಂದ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
Advertisement
ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನೀಲಂ ಶಿಂಧೆ ಅವರ ಎದೆ ಮತ್ತು ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಎರಡು ದಿನಗಳ ನಂತರ ಅಪಘಾತದ ಬಗ್ಗೆ ಅವರ ಕುಟುಂಬಕ್ಕೆ ತಿಳಿದುಬಂದಿದೆ. ಕುಟುಂಬದವರ ಪ್ರಕಾರ, ಆಸ್ಪತ್ರೆಯು ಅವರ ಮೆದುಳಿನ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿದೆ ಎನ್ನಲಾಗಿದೆ.
Advertisement
ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಪ್ರಯಾಣ ಪರವಾನಗಿಗಳನ್ನು ಸಾಮಾನ್ಯವಾಗಿ ತ್ವರಿತವಾಗಿ ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ವಿಳಂಬಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.