ಕಲಬುರಗಿ: ಅಪಘಾತವಾದಾಗ ಸಹಾಯಕ್ಕೆ ಧಾವಿಸಿ ಮಾನವೀಯತೆಯನ್ನು ತೋರಿಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಪಘಾತವಾದ ಸಂದರ್ಭದಲ್ಲಿ ಮಾನವೀಯತೆ ಸತ್ತುಹೋಗುತ್ತದೆ ಎನ್ನುವುದಕ್ಕೆ ರಾಜ್ಯದಲ್ಲಿ ಮತ್ತೊಂದು ಪ್ರಕರಣ ಈಗ ಸಿಕ್ಕಿದೆ.
ಬೈಕ್ ಅಪಘಾತ ನಡೆದು 108 ಅಂಬುಲೆನ್ಸ್ ಬರದ ಹಿನ್ನಲೆ ತಾಯಿಯನ್ನು ಹೊತ್ತು ಮಗ ಆಸ್ಪತ್ರಗೆ ಸಾಗಿರುವ, ಹೃದಯ ವಿದ್ರಾವಕ ಘಟನೆ ಕಲಬುರಗಿಯ ಉದನೂರ ಕ್ರಾಸ್ ಬಳಿ ಗುರುವಾರ ನಡೆದಿದೆ.
Advertisement
Advertisement
ಏನಿದು ಘಟನೆ?
ಮಗನನ್ನು ಭೇಟಿಯಾಗಲು ಸಿದ್ದಮ್ಮ ಎಂಬವರು ಬರುತ್ತಿದ್ದಾಗ ಪಲ್ಸರ್ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ತೀವ್ರ ರಕ್ತ ಸ್ರಾವದಲ್ಲಿ ಬಳಲುತ್ತಿದ್ದ ಸಿದ್ದಮ್ಮ ಅವರನ್ನು ಆಸ್ಪತ್ರಗೆ ದಾಖಲಿಸಲು ಮಗ ಮಹಾಂತೇಶ 108 ಅಂಬ್ಯುಲೆನ್ಸ್ ಗೆ ಕರೆ ಮಾಡುತ್ತಾರೆ.
Advertisement
ವಿಚಾರ ತಿಳಿದರೂ ಒಂದು ಗಂಟೆಯಾದರೂ ಅಂಬುಲೆನ್ಸ್ ಸ್ಥಳಕ್ಕೆ ಬರಲೇ ಇಲ್ಲ. ಜನ ಸಾಮಾನ್ಯರು ಈ ದೃಶ್ಯವನ್ನು ನೋಡುತ್ತಿದ್ದರೆ ವಿನಾಃ ಯಾರೂ ಸಹಾಯ ಮಾಡಲು ಮುಂದಾಗಲೇ ಇಲ್ಲ.
Advertisement
ಕೊನೆಗೆ ಯಾರ ಸಹಾಯ ಸಿಗದೇ ಇದ್ದಾಗ ತಾಯಿಯನ್ನ ಎತ್ತಿಕೊಂಡು ಆಸ್ಪತ್ರೆಗೆ ನಡೆದಿದ್ದಾರೆ. ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂದು ಸಿದ್ದಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲ ಅಂತಾ ಪಬ್ಲಿಕ್ ಟಿವಿ ವರದಿ ನಂತರ, ಆಸ್ಪತ್ರೆಯ ಮುಖ್ಯಸ್ಥ ವಿಕ್ರಂ ರೆಡ್ಡಿ ಅವರು ಮಾನವೀಯತೆ ತೋರಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಸಿದ್ದಮ್ಮ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
https://youtu.be/_FXNSRP_ceg