ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲ್ಲು ನಾಯಕ ವಿರಾಟ್ ಕೊಹ್ಲಿ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
Advertisement
ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. 4ನೇ ಟೆಸ್ಟ್ ಪಂದ್ಯದ ಮೊದಲ ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿತ್ತು.
Advertisement
ಎರಡನೇ ಇನ್ನಿಂಗ್ಸ್‍ನಲ್ಲಿ 466ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. ಭಾರತದ ಬೌಲರ್‍ಗಳಾದ ಜಸ್ಪ್ರೀತ್ ಬುಮ್ರಾ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಸೇರಿದಂತೆ ಎಲ್ಲಾ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ಬ್ಯಾಟ್ಸ್ಮನ್‍ಗಳನ್ನು ಕಟ್ಟಿಹಾಕಿ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 191 ರನ್‍ಗಳಿಗೆ ಆಲೌಟ್ ಆಗಿ, ನಂತರ ಎರಡನೇ ಇನ್ನಿಂಗ್ಸ್‍ನಲ್ಲಿ 466 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು
Advertisement
Advertisement
ಭಾರತ ತಂಡದ ಈ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿಯ ದೇಹ ಭಾಷೆಯೇ ಕಾರಣ. ತಂಡಕ್ಕೆ ಅವರು ನೀಡುವ ಹುರುಪು ಗೆಲುವಿಗೆ ಸಹಕಾರಿ ಎಂದು ಇಂಜಮಾಮುಲ್ ಹಕ್ ಕೊಹ್ಲಿಯನ್ನು ಹೊಗಳಿದ್ದಾರೆ. ಇದನ್ನೂ ಓದಿ: ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ