ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (Dr.Manjunath) ಗೆಲುವಿಗಾಗಿ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ (Sudha Murty) ಹರಕೆಹೊತ್ತಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿ, ಸುಧಾಮೂರ್ತಿ ಅವರು ಮಂತ್ರಾಲಯದಲ್ಲಿ 6 ಕಿಮೀ ಪಾದಯಾತ್ರೆ ಮಾಡಿ ರಾಯರಸೇವೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಅಗತ್ಯ ಇಲ್ಲ: ಮಹದೇವಪ್ಪ
ನನ್ನ ಗೆಲುವಿನ ಬಗ್ಗೆ ಸಾಕಷ್ಟು ಜನ ವಿಶ್ವಾಸ ತುಂಬುತ್ತಿದ್ದಾರೆ. ಜಯದೇವ ಆಸ್ಪತ್ರೆಯ ಕೆಲಸದ ಬಗ್ಗೆ ಜನ ಮಾತನಾಡುತ್ತಾರೆ. ಜಯದೇವ ಆಸ್ಪತ್ರೆ ಅಭಿವೃದ್ಧಿಗೆ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕೊಡುಗೆ ಕೂಡಾ ಇದೆ ಎಂದು ಹೇಳಿದ್ದಾರೆ.
ಆಗ ಆಸ್ಪತ್ರೆ ಅಭಿವೃದ್ಧಿಗೆ ಸಾಕಷ್ಟು ಸಹಾಯ ಮಾಡಿದರು. ಅವರಿಗೆ ನನ್ನ ಮೇಲೆ ಅಷ್ಟೊಂದು ನಂಬಿಕೆ ಇತ್ತು. ಮೊನ್ನೆಯೂ ಅವರ ಮನೆಗೆ ಹೋದಾಗ ನನ್ನ ಗೆಲುವಿಗೆ ಹರಕೆ ಹೊತ್ತೊರುವುದಾಗಿ ತಿಳಿಸಿದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್ 9 ರಂದು ಮೋದಿ ಪ್ರಮಾಣ ವಚನ!
ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ 6 ಕಿಮೀ ಪಾದಯಾತ್ರೆ ಮಾಡಿ ಸೇವೆ ಮಾಡ್ತೀನಿ ಅಂದ್ರು. ಅವರ ಅಭಿಮಾನಕ್ಕೆ ನಾನು ಚಿರಋಣಿ ಆಗಿ ಇರ್ತೇನೆ ಎಂದಿರುವ ಡಾ.ಮಂಜುನಾಥ್ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.