– ಹೆಚ್ಚಿನ ಸಮಯ ಕೆಲಸ ಮಾಡಿ ಎಂದು ಯಾರೂ ಹೇರಬಾರದು.. ಆದರೆ, ಇದು ಆತ್ಮಾವಲೋಕನದ ವಿಷಯ
ನವದೆಹಲಿ: ನಾನು ಪ್ರತಿದಿನ ಬೆಳಗ್ಗೆ 6:20 ಕ್ಕೆ ಆಫೀಸ್‌ಗೆ ಹೋಗಿ ರಾತ್ರಿ 8:30 ಗಂಟೆ ವರೆಗೂ ಕೆಲಸ ಮಾಡುತ್ತಿದ್ದೆ ಎಂದು ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ತಿಳಿಸಿದ್ದಾರೆ.
Advertisement
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈಗ ಯಾರು ಕೂಡ ಇನ್ನೊಬ್ಬ ವ್ಯಕ್ತಿಯ ಮೇಲೆ ದೀರ್ಘ ಕೆಲಸದ ಸಮಯವನ್ನು ಹೇರಬಾರದು. ಇವು ಚರ್ಚೆಯ ವಿಷಯ ಅಲ್ಲ. ಆತ್ಮಾವಲೋಕನಕ್ಕೆ ಸಂಬಂಧಿಸಿದ ವಿಷಯಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು 40 ವರ್ಷಗಳ ಕಾಲ ವಾರಕ್ಕೆ 85-90 ಗಂಟೆ ಕೆಲಸ ಮಾಡಿದ್ದೆ, ನನ್ನ ಶ್ರಮ ವ್ಯರ್ಥವಾಗಲಿಲ್ಲ: ನಾರಾಯಣ ಮೂರ್ತಿ
Advertisement
Advertisement
ನಾನು ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8:30 ಕ್ಕೆ ಹೊರಗೆ ಬರುತ್ತಿದ್ದೆ. ಅದು ಸತ್ಯ, ನಾನು ಅದನ್ನು ಮಾಡಿದ್ದೇನೆ. ನಾನು 40 ವರ್ಷ ವಯಸ್ಸಿನವನಿದ್ದಾಗ ಇಷ್ಟು ಸಮಯ ಕೆಲಸ ಮಾಡಿದ್ದೇನೆ. ಇದು ಚರ್ಚೆಗೆ ಒಳಪಡಿಸುವ ವಿಷಯ ಅಲ್ಲ. ನಿಮಗೆ ನೀವೇ ತೀರ್ಮಾನ ಮಾಡಬಹುದು. ನೀವು ಬಯಸಿದ್ದನ್ನು ಮಾಡಬಹುದು. ನೀವು ಅದನ್ನು ಮಾಡಬೇಕು, ನೀವು ಅದನ್ನು ಮಾಡಬಾರದು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಜಾಗತಿಕವಾಗಿ ದೇಶವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ ಭಾರತದ ಯುವಸಮುದಾಯವು ಕಠಿಣ ಪರಿಶ್ರಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು 78 ವರ್ಷದ ನಾರಾಯಣ ಮೂರ್ತಿ ಅವರು ಹೇಳಿದ್ದರು. ನಮ್ಮ ಯುವಕರು, ‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕು ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
ನಾರಾಯಣ ಮೂರ್ತಿ ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕಿತು. ಉದ್ಯಮಿಯೊಬ್ಬರ ಇಂತಹ ಹೇಳಿಕೆಯು ಉದ್ಯೋಗಿಗಳ ಶೋಷಣೆಗೆ ಕಾರಣವಾಗುತ್ತದೆ. ಕೆಲಸ-ಜೀವನದ ಸಮತೋಲನದ ಅಗತ್ಯವನ್ನು ಅವರು ಅರಿತು ಮಾತನಾಡಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.