Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರು ಉಪವಿಭಾಗಾಧಿಕಾರಿಗೆ 25,000, ತಹಶೀಲ್ದಾರ್‌ಗೆ 50 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರು ಉಪವಿಭಾಗಾಧಿಕಾರಿಗೆ 25,000, ತಹಶೀಲ್ದಾರ್‌ಗೆ 50 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ

Bengaluru City

ಬೆಂಗಳೂರು ಉಪವಿಭಾಗಾಧಿಕಾರಿಗೆ 25,000, ತಹಶೀಲ್ದಾರ್‌ಗೆ 50 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ

Public TV
Last updated: December 7, 2025 3:19 pm
Public TV
Share
2 Min Read
RTI Fine Officers
SHARE

ಬೆಂಗಳೂರು: ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಮಾಹಿತಿ ನೀಡದೇ ನಿರ್ಲಕ್ಷಿಸಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಡಾ.ಕಿರಣ್ ಅವರಿಗೆ 25,000 ರೂ. ದಂಡ ಮತ್ತು ಬೆಂಗಳೂರು ಉತ್ತರ ತಹಶೀಲ್ದಾರ್ ಮಧುರಾಜ್ ಅವರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಹಿತಿ ಆಯೋಗ ತಲಾ 25,000 ರೂ. ದಂಡ ವಿಧಿಸಿದೆ.

ನಿಗದಿತ ಅವಧಿಯಲ್ಲಿ ಮಾಹಿತಿ ನೀಡದಿರುವುದಲ್ಲದೆ, ಆಯೋಗದ ವಿಚಾರಣೆಗಳಿಗೂ ಸತತ ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಆಯೋಗ ಈ ಅಧಿಕಾರಿಗಳಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ತಲಾ 25,000 ರೂ. ದಂಡ ವಿಧಿಸಿರುವುದಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಲಾಖಾ ವಿಚಾರಣೆ ನಡೆಸಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ಯಾಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಇಬ್ಬರೂ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ.

ಬೆಂಗಳೂರು ಬೆಳತೂರು ಕಾಲೋನಿ ನಿವಾಸಿ ವೆಂಕಟೇಶ್ ಅವರು ವರ್ಷಗಳ ಹಿಂದೆ ಕೆ.ದೊಮ್ಮಸಂದ್ರ ಗ್ರಾಮದ ತಮ್ಮ ಜಮೀನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಒದಗಿಸುವಂತೆ ಬೆಂಗಳೂರು ಉತ್ತರ ಎಸಿ ಅವರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಯೋಗಕ್ಕೆ ಅವರು ಮೇಲ್ಮನವಿ ಸಲ್ಲಿಸಿದ್ದರು. ಆಯೋಗ ಎಸಿ ಅವರಿಗೆ ವಿಚಾರಣೆಗೆ ಹಾಜರಾಗಿ ಈ ಬಗ್ಗೆ ವಿವರ ನೀಡುವಂತೆ ಸೂಚಿಸಿತ್ತು. ಹಲವು ವಿಚಾರಣೆಗಳಿಗೆ ಸತತ ಗೈರಾಗಿದ್ದ ಅಧಿಕಾರಿಗೆ ಕಾರಣ ಕೇಳಿ ಆಯೋಗ ನೋಟಿಸ್ ನೀಡಿತ್ತು. ಆದರೆ, ಉಪವಿಭಾಗಾಧಿಕಾರಿ ಡಾ.ಕಿರಣ್ ಆಯೋಗದ ನೋಟಿಸ್‌ಗೆ ಉತ್ತರಿಸದೇ ನಿರ್ಲಕ್ಷಿಸಿದ್ದರು. ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಪ್ಪತೈದು ಸಾವಿರ ದಂಡ ವಿಧಿಸಿದ್ದಲ್ಲದೇ, ತಕ್ಷಣ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.

ಅದೇ ರೀತಿ ಬೆಂಗಳೂರಿನ ಚಂದ್ರಪ್ಪ ಎಂಬವರು ಮಾಳಗಾಳು ಗ್ರಾಮದ ತಮ್ಮ ಕುಟುಂಬದ ಆಸ್ತಿಯ ಕೆಲವು ದಾಖಲೆಗಳಿಗಾಗಿ ಬೆಂಗಳೂರು ಉತ್ತರ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಮಧುರಾಜ್ ಕೂಡ ಮಾಹಿತಿ ನೀಡಿಲ್ಲ. ಅಲ್ಲದೇ ಆಯೋಗದ ವಿಚಾರಣೆಗಳಿಗೆ ಸತತ ಗೈರಾಗಿ ನಿರ್ಲಕ್ಷಿಸಿದ್ದರು. ಆಯೋಗ ನೀಡಿದ್ದ ಶೋಕಾಸ್ ನೋಟಿಸ್‌ಗೂ ಅವರು ಉತ್ತರಿಸಿರಲಿಲ್ಲ. ಅವರಿಗೂ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಲಾ ಇಪ್ಪತೈದು ಸಾವಿರ ಅಂದರೆ, ಒಟ್ಟು ಐವತ್ತು ಸಾವಿರ ದಂಡ ವಿಧಿಸಿದ್ದಲ್ಲದೇ, ಅರ್ಜಿದಾರರಿಗೆ ತಕ್ಷಣ ಸೂಕ್ತ ದಾಖಲೆ ಒದಗಿಸುವಂತೆ ಆಯೋಗ ಆದೇಶಿಸಿ ಇಲಾಖಾ ವಿಚಾರಣೆಯ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ, ಇದೇ ರೀತಿ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದ ಬೆಂಗಳೂರು ದಕ್ಷಿಣ ಎಸಿ ವಿಶ್ವನಾಥ್, ದೊಡ್ಡಬಳ್ಳಾಪುರ ಎಸಿ ದುರ್ಗಾಶ್ರೀ, ಕೆಆರ್ ಪುರಂ ತಹಶೀಲ್ದಾರ್ ರಾಜು, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಆಯೋಗ ದಂಡ ವಿಧಿಸಿತ್ತು. ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರಿಗೆ ನಿಗದಿತ ಅವಧಿಯಲ್ಲೇ ಮಾಹಿತಿ ಅಥವಾ ಕನಿಷ್ಠ ಸೂಕ್ತ ಹಿಂಬರಹ ನೀಡಬೇಕು. ಅಲ್ಲದೇ ಆಯೋಗದ ವಿಚಾರಣೆಗೆ ಖುದ್ದಾಗಿ ಹಾಜರಾಗಿ ಅಥವಾ ತಮ್ಮ ಪ್ರತಿನಿಧಿಗಳನ್ನು ವಿಚಾರಣೆಗೆ ಕಳಿಸಿ ಸೂಕ್ತ ವಿವರಣೆ ನೀಡುವಂತೆ ಆಯೋಗ ಕಟ್ಟಪ್ಪಣೆ ಮಾಡಿದೆ. ತಪ್ಪಿದಲ್ಲಿ ದಂಡ ವಿಧಿಸಿ, ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅಧಿಕಾರಿಗಳಿಗೆ ಆಯೋಗ ಎಚ್ಚರಿಕೆ ಸಂದೇಶ ರವಾನಿಸಿದೆ. ಉದ್ದೇಶಪೂರ್ವಕವಾಗಿ ಅರ್ಜಿದಾರನ್ನು ಅಲೆದಾಡಿಸಿ ಸತಾಯಿಸುವ ಅಧಿಕಾರಿಗಳಿಂದ ಸಂತ್ರಸ್ತ ಅರ್ಜಿದಾರರಿಗೆ ಪರಿಹಾರ ಕೊಡಿಸಲೂ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ಆಯೋಗ ತಿಳಿಸಿದೆ.

TAGGED:bengaluruKarnataka Information Commissiontahsildarತಹಶೀಲ್ದಾರ್ಬೆಂಗಳೂರುಮಾಹಿತಿ ಆಯೋಗ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Bengaluru Kalaburagi Vande Bharat Express train
Bagalkot

ಮಾ.15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

Public TV
By Public TV
7 minutes ago
Restaurant Hotel
Bengaluru City

ಹೋಟೆಲ್‌ಗಳಿಗೆ ಸಂಕಷ್ಟ – ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಸರಬರಾಜು ಬಂದ್‌

Public TV
By Public TV
8 minutes ago
Mariana L Naishuler
Latest

ಚೆನ್ನೈನ US ಕಾನ್ಸುಲೇಟ್ ಜನರಲ್ ಆಗಿ ಮರಿಯಾನಾ ಎಲ್.ನೈಶುಲರ್ ಅಧಿಕಾರ ಸ್ವೀಕಾರ

Public TV
By Public TV
36 minutes ago
Attack on Iranian oil facilities US objects to Israels actions
Latest

ಇರಾನ್‌ ಬೀದಿಯಲ್ಲಿ ಬೆಂಕಿಯ ಮಳೆ – ಇಸ್ರೇಲ್‌ ದಾಳಿಗೆ ಅಮೆರಿಕ ಅಸಮಾಧಾನ

Public TV
By Public TV
47 minutes ago
Mallikarjuna Mutya 3
Districts

ನಿರೀಕ್ಷಣಾ ಜಾಮೀನು ಅರ್ಜಿ ವಜಾ – ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ

Public TV
By Public TV
1 hour ago
Karwar Container Car Accident
Crime

ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಕಂಟೇನರ್ ಚಾಲಕ – ಮಗು ಸಾವು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?