ನವದೆಹಲಿ: ಶುಕ್ರವಾರ ರಾತ್ರಿ ಪಾಕಿಸ್ತಾನದಿಂದ ಬಿಡುಗಡೆಯಾಗಿ ಸುರಕ್ಷಿತವಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಾವಿರಾರು ಜನರು ಅಮೃತ್‍ಸರದ ವಾಘಾ ಗಡಿ ಬಳಿ ಜಮಾಯಿಸಿದ್ದರು. ಆದರೆ ಅಭಿನಂದನ್ ಜೊತೆ ಒಬ್ಬ ಮಹಿಳೆ ಬಂದಿದ್ದರು. ಅವರು ಯಾರ ಎಂಬ ಪ್ರಶ್ನೆ ಎಲ್ಲರನ್ನೂ ಮೂಡಿತ್ತು.
ಅಭಿನಂದನ್ ಅವರ ಜೊತೆಯಲ್ಲಿ ಪಾಕಿಸ್ತಾನದ ಗಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫರಿಹಾ ಬುಗ್ತಿ ಎಂದು ತಿಳಿದು ಬಂದಿದೆ.
Advertisement
Advertisement
ಡಾ.ಬುಗ್ತಿ ಅವರು ಎಫ್‍ಎಸ್‍ಪಿ (ಭಾರತದ ಐಎಫ್‍ಎಸ್ ಗೆ ಸಮಾನ) ಅಧಿಕಾರಿ ಮತ್ತು ಅವರು ವಿದೇಶಾಂಗ ಕಚೇರಿಯಲ್ಲಿ ಭಾರತದ ವ್ಯವಹಾರಗಳನ್ನು ನಿರ್ವಹಿಸುವ ಉಸ್ತುವಾರಿ ಕೆಲಸವನ್ನು ವಹಿಸಿಕೊಂಡಿದ್ದಾರೆ.
Advertisement
ಡಾ.ಬುಗ್ತಿ ಪಾಕ್ ಸೆರೆಯಲ್ಲಿರುವ ಕುಲ್‍ಭೂಷಣ್ ಜಾಧವ್ ಪ್ರಕರಣವನ್ನು ನಿರ್ವಹಿಸುವ ಪ್ರಮುಖ ಪಾಕ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಜಾಧವ್ ಅವರು ಭಾರತೀಯ ಪತ್ತೇದಾರಿ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಇಸ್ಲಾಮಾಬಾದ್ ನಲ್ಲಿದ್ದ ಜಾಧವ್, ಅವರ ತಾಯಿ ಮತ್ತು ಪತ್ನಿ ನಡುವಿನ ಸಭೆಯಲ್ಲಿಯೂ ಡಾ.ಬುಗ್ತಿ ಉಪಸ್ಥಿತರಿದ್ದರು.
Advertisement
https://www.youtube.com/watch?v=ArvRnqPs81s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv