ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ನಟ ರಣವೀರ್ ಸಿಂಗ್ ಅವರ ಸಾಂಗ್ ಗೆ ಹೊಸ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಶಿಲ್ಪಾ ತನ್ನ ತಲೆ ಕೂದಲಿನ ಅಂಡರ್ಕಟ್ ಅನ್ನು ತೋರಿಸಲು ಯಾವುದೇ ವಿಶೇಷ ಸಮಯ ಬೇಕಿಲ್ಲ. ಅದಕ್ಕೆ ಶಿಲ್ಪಾ ಇಂದು ಇನ್ಸ್ಟಾಗ್ರಾಮ್ ನಲ್ಲಿ, ಇವತ್ತು ಡ್ಯಾನ್ಸ್ ಮಾಡಲು ಮೂಡ್ ಇದೆ. ರಣವೀರ್ ಸಿಂಗ್ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ ಎಂದು ಬರೆದಿದ್ದಾರೆ.
Advertisement
View this post on Instagram
Advertisement
ಪ್ರಸ್ತುತ ಶಿಲ್ಪಾ, ರಣವೀರ್ ಅವರ 2013 ರಲ್ಲಿ ತೆರೆಕಂಡ ‘ರಾಮ್ಲೀಲಾ’ ಸಿನಿಮಾದ ತತ್ತಡ್ ತತ್ತಡ್ ಟ್ರ್ಯಾಕ್ನ ಹುಕ್ ಸ್ಟೆಪ್ ಹಾಕಿದ್ದಾರೆ. ಸಾಂಗ್ ಮೂಲಕ ಶಿಲ್ಪಾ ತನ್ನ ಅಂಡರ್ಕಟ್ ಹೇರ್ಸ್ಟೈಲ್ ಕಡೆ ವೀಕ್ಷಕರ ಗಮನವನ್ನು ಸೆಳೆಯಲು ಈ ವೀಡಿಯೋವನ್ನು ಮಾಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್
Advertisement
ಶಿಲ್ಪಾ ಶೆಟ್ಟಿ ಅವರು ತಲೆಕೂದಲಿನ ಅಂಡರ್ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಬಜ್ ಕಟ್ ನಲ್ಲಿ ಒಂದು ವಿಧವಾದ ಈ ಅಂಡರ್ಕಟ್ ಮಾಡಿಸಿಕೊಂಡಿರುವ ನಟಿ ತಮ್ಮ ಹೇರ್ ಸ್ಟೈಲ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಿಟ್ನೆಸ್ ವೀಡಿಯೋ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಕಟ್ ಮಾಡಿಸಿಕೊಂಡ ವಿಷಯವನ್ನೂ ಹಂಚಿಕೊಂಡಿದ್ದರು. ನಟಿಯ ಹೇರ್ ಕಟ್ ನೋಡಿದ ಅಭಿಮಾನಿಗಳು ಕೆಲವರು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಲವರು ಚೆನ್ನಾಗಿಲ್ಲ ಎಂದು ಕಮೆಂಟ್ ಮಾಡಿದ್ದರು.
Advertisement
View this post on Instagram
ಪತಿ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಗುವ ಮುನ್ನವೇ ರಿಯಾಲಿಟಿ ಡ್ಯಾನ್ಸ್ ಶೋಗೆ ಮರಳಿದ್ದ ಶಿಲ್ಪಾ ಶೆಟ್ಟಿ, ಮತ್ತೆ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ಫೋಟೋಶೂಟ್ ಹಾಗೂ ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ: ಅಶ್ವಥ್ ನಾರಾಯಣ