ಲಕ್ನೋ: 7 ತಿಂಗಳ ಮಗುವನ್ನು (Child) ಬೀದಿ ನಾಯಿಗಳು (Stray Dog) ಕ್ರೂರವಾಗಿ ಕಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾ (Noida) ಸೆಕ್ಟರ್ 100ನ ಐಷಾರಾಮಿ ಲೋಟಸ್ ಬೌಲೆವಾರ್ಡ್ ಸೊಸೈಟಿಯಲ್ಲಿ ನಡೆದಿದೆ. ಘಟನೆಯಿಂದ ಬೆಚ್ಚಿ ಬಿದ್ದಿರುವ ನಿವಾಸಿಗಳು ಶ್ವಾನ ಪ್ರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವರದಿಗಳ ಪ್ರಕಾರ ಬೀದಿ ನಾಯಿಗಳ ದಾಳಿಗೆ ಬಲಿಯಾದ 7 ತಿಂಗಳ ಮಗುವನ್ನು ಅರವಿಂದ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಸಪ್ನಾ ದೇವಿ ದಿನಗೂಲಿ ಕೆಲಸಕ್ಕೆ ಹೋಗುವಾಗ ಮಗುವನ್ನು ಆಟವಾಡಲು ಸೊಸೈಟಿಯೊಳಗೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ.
Advertisement
Advertisement
ಈ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕಿರುಚಾಟ ಕೇಳಿ ಸೊಸೈಟಿ ನಿವಾಸಿಗಳು ಹೊರಬಂದಾಗ ಮಗು ಗಂಭೀರವಾಗಿ ಗಾಯಗೊಂಡಿತ್ತು. ಆಘಾತಕಾರಿ ವಿಷಯ ಎಂದರೆ ನಾಯಿಗಳು ಮಗುವಿನ ಹೊಟ್ಟೆಯನ್ನು ಸೀಳಿ ಕರುಳನ್ನೇ ಹರಿದು ಹಾಕಿವೆ. ತಕ್ಷಣ ಮಗುವನ್ನು ಸ್ಥಳೀಯರು ನೋಯ್ಡಾದ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಇದನ್ನೂ ಓದಿ: ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ- ಇಬ್ಬರು ಪೈಲಟ್ ಸೇರಿ 6 ಮಂದಿ ದುರ್ಮರಣ
Advertisement
ಬೀದಿ ನಾಯಿಗಳು ಹಲವು ವರ್ಷಗಳಿಂದ ಸೊಸೈಟಿಯಲ್ಲಿ ಹಲವರ ಮೇಲೆ ದಾಳಿ ಮಾಡಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಆದರೆ ಕೆಲ ಶ್ವಾನ ಪ್ರಿಯರ ಅಡ್ಡಿಯಿಂದಾಗಿ ಬೀದಿ ನಾಯಿಗಳನ್ನು ಅಲ್ಲಿಂದ ಬೇರೆಡೆಗೆ ಒಯ್ಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಿಟ್‌ಬುಲ್ ತಳಿಯ ನಾಯಿ ತನ್ನ ಮಾಲೀಕನನ್ನೇ ಕೊಂದಿತ್ತು. ಇತ್ತೀಚೆಗೆ ಘಾಜಿಯಾಬಾದ್ ಪುರಸಭೆ ಪಿಟ್‌ಬುಲ್, ರಾಟ್‌ವೀಲರ್‌ನಂತಹ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದನ್ನೂ ಓದಿ: ನಮಾಜ್ ವಿಷಯಕ್ಕೆ ಗಲಾಟೆ – ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು
Live Tv