ಓವಲ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 44.3 ಓವರ್‍ಗಳಲ್ಲಿ 191 ರನ್‍ಗಳಿಗೆ ಆಲೌಟ್ ಆಯ್ತು. ಸುಲಭ ಸವಾಲನ್ನು ಪಡೆದ ಭಾರತ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಅವರ ಅರ್ಧಶತಕದಿಂದಾಗಿ 38 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 193 ರನ್‍ಗಳಿಸಿ ಗುರಿ ಮುಟ್ಟಿತು.
Advertisement
ರೋಹಿತ್ ಶರ್ಮಾ 12 ರನ್‍ಗಳಿಸಿ ಔಟಾದಾಗ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ವಿಕೆಟ್‍ಗೆ ಧವನ್ ಮತ್ತು ಕೊಹ್ಲಿ 148 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಭದ್ರ ಆಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಧವನ್ 78 ರನ್(83 ಎಸೆತ, 12 ಬೌಂಡರಿ, 1 ಸಿಕ್ಸರ್)ಗಳಿಸಿದ್ದಾಗ ಇಮ್ರಾನ್ ತಾಹಿರ್ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಡು ಪ್ಲಸೆಸ್‍ಗೆ ಕ್ಯಾಚ್ ನೀಡಿ ಔಟಾದರು.
Advertisement
ಕೊಹ್ಲಿ ಮಿಂಚು: ಪಾಕ್ ವಿರುದ್ಧದ ಪಂದ್ಯದಲ್ಲಿ ಔಟಾಗದೇ 81 ರನ್ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. 71 ಎಸೆತದಲ್ಲಿ 50 ಅರ್ಧಶತಕ ಪೂರ್ಣಗೊಳಿಸಿದ ಕೊಹ್ಲಿ ಅಂತಿಮವಾಗಿ 76 ರನ್(101 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಔಟಾಗದೇ ಉಳಿದರು. ಯವರಾಜ್ ಸಿಂಗ್ ಮತ್ತು ಕೊಹ್ಲಿ ಮುರಿಯದ ಮೂರನೇ ವಿಕೆಟ್‍ಗೆ 47 ಎಸೆತಗಳಲ್ಲಿ 42 ರನ್ ಜೊತೆಯಾಟ ಆಡಿದರು. 23 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಯುವಿ ತಾಹಿರ್ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
Advertisement
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‍ಗಳು ಕೈಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿದ್ದ ಕಾರಣ ಗೆಲುವು ಸಾಧಿಸಿದೆ. ಮೂರು ರನ್ ಔಟ್ ಆಫ್ರಿಕಾದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿತು.
Advertisement
115 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಆಫ್ರಿಕಾ ಕೊನೆಯ 9 ವಿಕೆಟ್ ಗಳನ್ನು 75 ರನ್‍ಗಳ ಅಂತರದಲ್ಲಿ ಕಳೆದುಕೊಂಡಿತು. ಎಬಿಡಿ ವಿಲಿಯರ್ಸ್ 16 ರನ್‍ಗಳಿಸಿದ್ದಾಗ ರನೌಟ್ ಆದರೆ, ನಂತರ ಬಂದ ಡೇವಿಡ್ ಮಿಲ್ಲರ್ 1 ರನ್‍ಗಳಿಸಿ ರನ್ ಔಟ್‍ಗೆ ಬಲಿಯಾಗಿದ್ದು ಭಾರತಕ್ಕೆ ನೆರವಾಯಿತು.
ಭಾರತದ ಪರ ಭುವನೇಶ್ವರ್ ಕುಮಾರ್ 23 ರನ್ ನೀಡಿ 2 ವಿಕೆಟ್ ಪಡೆದರೆ ಬುಮ್ರಾ 28 ರನ್ ನೀಡಿ 2 ವಿಕೆಟ್ ಪಡೆದರು. ಜಡೇಜಾ, ಅಶ್ವಿನ್, ಹಾರ್ದಿಕ್ ಪಾಂಡ್ಯಾ ತಲಾ ಒಂದೊಂದು ವಿಕೆಟ್ ಪಡೆದರು. 6 ಲೆಗ್‍ಬೈ, 10 ವೈಡ್ ಎಸೆಯುವ ಮೂಲಕ ಭಾರತ ಇತರೇ ರೂಪದಲ್ಲಿ 16 ರನ್ ನೀಡಿತು. ಜಸ್‌ಪ್ರೀತ್ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ಬಾಂಗ್ಲಾ ವಿರುದ್ಧ ಸೆಣಸಲಿದ್ದರೆ, ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ಪಂದ್ಯದ ವಿಜೇತ ತಂಡ ಇಂಗ್ಲೆಂಡ್ ಜೊತೆ ಆಡಬೇಕಿದೆ.
Jasprit Bumrah wins Player of the Match for his bowling that saw India into the Semi Finals of #CT17https://t.co/oXl2mH0zvg #INDvSA pic.twitter.com/HQDMmxMK3S
— ICC (@ICC) June 11, 2017
???????????? @BhuviOfficial and @Jaspritbumrah93 each took a pair of wickets, but the damage was done in the field with three run outs #INDvSA #CT17 pic.twitter.com/ZZiSraTGaM
— ICC (@ICC) June 11, 2017
The chase is on! 192 for a spot in the semi-finals! #INDvSA LIVE: https://t.co/oXl2mH0zvg #CT17 pic.twitter.com/hoI01AtuXT
— ICC (@ICC) June 11, 2017