ಮೌಂಟ್ ಮಾಂಗನುಯಿ: ಟೀಂ ಇಂಡಿಯಾ ಅನುಭವಿ ಆಟಗಾರ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಭಾನುವಾರ ನಡೆದ ಅಂತಿಮ ಟಿ20 ಪಂದ್ಯದ ಬ್ಯಾಟಿಂಗ್ ವೇಳೆ ರೋಹಿತ್ ಸ್ನಾಯು ಸೆಳೆತ ಸಮಸ್ಯೆಯಿಂದ ಆಟದ ನಡುವೆಯೇ ಹಿಂದಿರುಗಿದ್ದರು.
ಅಂತಿಮ ಟಿ20 ಪಂದ್ಯದಲ್ಲಿ 41 ಎಸೆತಗಳಲ್ಲಿ 60 ರನ್ ಸಿಡಿಸಿದ್ದ ರೋಹಿತ್, ಪಂದ್ಯದಲ್ಲಿ ಸಿಕ್ಸರ್ ಸಿಡಿಸಿದ ಬಳಿಕ ಗಾಯದ ಸಮಸ್ಯೆಗೆ ಒಳಗಾದರು. ಸದ್ಯ ರೋಹಿತ್ ಮುಂಬರುವ ಏಕದಿನ ಮತ್ತು ಟೆಸ್ಟ್ ಟೂರ್ನಿಗಳಿಗೆ ಅಲಭ್ಯರಾದರೆ ಆ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
Advertisement
Advertisement
ರೋಹಿತ್ ಗಾಯದ ಸಮಸ್ಯೆ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು, ರೋಹಿತ್ ಪ್ರವಾಸದಿಂದ ಹೊರಗಿದ್ದಾರೆ. ಅವರಿಗೆ ಆಗಿರುವ ಸಮಸ್ಯೆಯ ಪ್ರಭಾವ ಬಗ್ಗೆ ಮಾಹಿತಿ ಪಡೆಯಬೇಕಿದೆ. ಅವರು ಪ್ರವಾಸದ ಸರಣಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಕಳೆದ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿ ಆರಂಭಿಕರಾಗಿ ಕಣಕ್ಕೆ ಇಳಿಸಿದ್ದರು. ಆದರೆ ದೊರೆತ ಅವಕಾಶವನ್ನು ಬಳಿಸಿಕೊಳ್ಳಲು ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲರಾದರು. ಆ ಬಳಿಕ ಕೆಎಲ್ ರಾಹುಲ್ ಅವರನ್ನು ಕೂಡಿಕೊಂಡ ರೋಹಿತ್ 2ನೇ ವಿಕೆಟ್‍ಗೆ 88 ರನ್ ಜೊತೆಯಾಟ ನೀಡಿದ್ದರು. ಸರಣಿಯಲ್ಲಿ ರೋಹಿತ್ ಶರ್ಮಾ ಅವರಿಗೆ 4 ಟಿ20 ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದರೆ, 5ನೇ ಪಂದ್ಯಕ್ಕೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು.
Advertisement
CHAMPIONS ???????? pic.twitter.com/PgwWZ2ElNR
— BCCI (@BCCI) February 2, 2020
ಟೀಂ ಇಂಡಿಯಾ ಫೆ.5ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಫೆ 21 ರಿಂದ 2 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ಸದ್ಯ ರೋಹಿತ್ ಅವರ ಸ್ಥಾನಕ್ಕೆ ಪೃಥ್ವಿ ಶಾ ಅಥವಾ ಶುಬ್‍ಮನ್ ಗಿಲ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.