ಹ್ಯಾಮಿಲ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯ ಗೆಲುವು ಪಡೆಯುವ ಉದ್ದೇಶ ಹೊಂದಿರುವ ಟೀಂ ಇಂಡಿಯಾಗೆ ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 213 ರನ್ ಗುರಿಯನ್ನು ನೀಡಿದೆ.
ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತು.
Advertisement
Innings Break!
New Zealand post a mammoth total of 212/4 for #TeamIndia to chase.
Will India chase this down or will the Kiwis defend their total? #NZvIND pic.twitter.com/s4ShooR4NU
— BCCI (@BCCI) February 10, 2019
Advertisement
ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಈ ಇಬ್ಬರ ಜೋಡಿಯನ್ನು ಮುರಿಯಲು ಕುಲ್ದೀಪ್ ಯಾದವ್ ಯಶಸ್ವಿಯಾದರು. ಬಳಿಕ ಮನ್ರೋರನ್ನು ಕೂಡಿಕೊಂಡ ನಾಯಕ ವಿಲಿಮ್ಸನ್ ರನ್ ಗಳಿಕೆ ಮತ್ತಷ್ಟು ವೇಗ ಕೊಟ್ಟರು. 10 ಓವರ್ ಗಳ ಅಂತ್ಯಕ್ಕೆ ಕಿವೀಸ್ 110 ರನ್ ಗಳಿಸಿದರೆ, 15 ಓವರ್ ಗಳ ಅಂತ್ಯಕ್ಕೆ ಈ ಮೊತ್ತ 151 ರನ್ ಗಳಿಗೆ ತಲುಪಿತ್ತು. ಈ ಹಂತದಲ್ಲಿ ಖಲೀಲ್ ಅಹ್ಮದ್ ಹಾಗೂ ಕುಲ್ದೀಪ್ ಯಾದವ್ ವಿಲಿಯಮ್ಸನ್, ಮನ್ರೋ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು.
Advertisement
Bhuvi strikes. This is so wide, but de Grandhomme swings himself off his feet trying to get to it. Gets an outside edge and Dhoni does the rest.
NZ 193/4 in 18.2 overs #NZvIND pic.twitter.com/okeKasIQJw
— BCCI (@BCCI) February 10, 2019
Advertisement
ಅಂತಿಮ 5 ಓವರ್ ಗಳಲ್ಲೂ ನ್ಯೂಜಿಲೆಂಡ್ ಬ್ಯಾಟ್ಸ್ ಮನ್‍ಗಳ ವೇಗಕ್ಕೆ ಕಡಿವಾಣ ಹಾಕಲು ತಿಣುಕಾಡಿದ ಟೀಂ ಇಂಡಿಯಾ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು. ನ್ಯೂಜಿಲೆಂಡ್ ಇನ್ನಿಂಗ್ಸ್ ನ ಅಂತಿಮ 5 ಓವರ್ ಗಳಲ್ಲಿ 61 ರನ್ ಹರಿದು ಬಂತು. ಡ್ಯಾರೆಲ್ ಮಿಚೆಲ್ 11 ಎಸೆತಗಳಲ್ಲಿ 19 ರನ್ ಮತ್ತು ರಾಸ್ ಟೇಲರ್ 7 ಎಸೆತಗಳಲ್ಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಟೀಂ ಇಂಡಿಯಾ ಗುರಿ ಬೆನ್ನತ್ತಲೂ ಯಶ್ವಿಯಾದರೆ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಗೆದ್ದ ಸರಣಿ ಗೆದ್ದ ಹೆಗ್ಗಳಿಕೆ ಪಡೆಯಲಿದ್ದು, ಭಾರತ ಬ್ಯಾಟ್ಸ್ ಮನ್ ಗಳ ಪ್ರದರ್ಶನ ನಿರ್ಣಯಕವಾಗಿದೆ.
The Munro show is over! Tried to launch another one out of the ground, but spoons it to Hardik coming in at long on, who makes no mistake
NZ 140/2 after 14 https://t.co/hL4Vq4hUCv #NZvIND pic.twitter.com/IGneqmAjIC
— BCCI (@BCCI) February 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv