– ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ರಾಜ್ಯ ಸರ್ಕಾರಗಳ ವಜಾ ಮಾಡಿತ್ತು
ಮಂಡ್ಯ: ಸಂಸದೆ ಸುಮಲತಾ (Sumalatha) ರಾಜಕೀಯ ನಡೆ ಪ್ರಕಟಕ್ಕೂ ಮುನ್ನವೇ ಅವರ ಆಪ್ತ ಇಂಡುವಾಳು ಸಚ್ಚಿದಾನಂದ (Induvalu Sachidananda), ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪರ ಪ್ರಚಾರಕ್ಕಿಳಿದಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಬೆನ್ನಿಗೆ ನಿಂತಿದ್ದ ಸಚ್ಚಿದಾನಂದ, ಈ ಬಾರಿಯೂ ತಮ್ಮ ಪರವಾಗಿ ನಿಲ್ಲುತ್ತಾರೆಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಇದರಿಂದ ದೊಡ್ಡ ಆಘಾತ ಉಂಟಾಗಿದೆ.
ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಚ್ಚಿದಾನಂದ ಅವರು ಭಾಗಿಯಾಗಿದ್ದಾರೆ. ಶನಿವಾರ ನಡೆದ ಸುಮಲತಾ ಬೆಂಬಲಿಗರ ಸಭೆಗೂ ಅವರು ಗೈರಾಗಿದ್ದರು. ಈ ಮೂಲಕ ಸುಮಲತಾ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ರೆ ತಮ್ಮ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ
ಸಭೆಯಲ್ಲಿ ಮಾತನಾಡಿರುವ ಸಚ್ಚಿದಾನಂದ ಅವರು, ಸಮಾಜದ ತಳ ಸಮುದಾಯದವರನ್ನು ಗುರುತಿಸಿ ಅವಕಾಶ ನೀಡಿದ್ದು ಪ್ರಧಾನಿ ಮೋದಿ, ಏ.2 ರಂದು ಬಿಜೆಪಿಯಿಂದ ನಾವು ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಲ್ಲ. ಅವರು ನಮ್ಮ ಮೈತ್ರಿ ಆಭ್ಯರ್ಥಿ ಎಂದು ಘೋಷಣೆ ಮಾಡಿ ಬೆಂಬಲ ನೀಡುತ್ತೇವೆ. ಈ ಮೂಲಕ ಮೋದಿಯವರ ಗೆಲುವಿಗೆ ನಾವು ಕುಮಾರಣ್ಣಾ ಅವರಿಗೆ ಬೆಂಬಲ ನೀಡಬೇಕು. ದೇಶ ಕಟ್ಟುವ ಕೆಲಸ ಮೋದಿ ಮಾಡಿದ್ದಾರೆ. ಅವರಿಂದ ದೇಶದಲ್ಲಿ ಅಪಾರ ಅಭಿವೃದ್ಧಿಯಾಗಿದೆ. ಸುಭದ್ರ ದೇಶ ಕಟ್ಟಲು ನರೇಂದ್ರ ಮೋದಿಯವರು ಅವಶ್ಯಕ, ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂದಿದ್ದಾರೆ.
ಹೆಚ್‍ಡಿಕೆ ಆರೋಗ್ಯದ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ರಮೇಶ್ ಬಂಡಿಸಿದ್ದೇಗೌಡ ಕ್ಷೇತ್ರದಲ್ಲಿ ಗೆದ್ದಿದ್ದು ಹೇಗೆ? ಅವರಿಗೆ ಬೆಂಬಲವಾಗಿ ದೊಡ್ಡಗೌಡರು ಹೇಗೆ ಸಹಕಾರ ನೀಡಿದರು. ಅದನ್ನೆಲ್ಲಾ ದೊಡ್ಡಗೌಡರು ಇಲ್ಲಿ ಬಂದು ಹೇಳಬೇಕು ಎಂದಿದ್ದಾರೆ.
ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಕಾಂಗ್ರೆಸ್ ಅತಿ ಹೆಚ್ಚು ತಿದ್ದುಪಡಿ ಮಾಡಿತ್ತು. 300ಕ್ಕೂ ಹೆಚ್ಚು ಸಲ ಕಾಂಗ್ರೆಸ್ ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಸಂವಿಧಾನ ವಿರೋಧವಾಗಿ ರಾಜ್ಯ ಸರ್ಕಾರಗಳನ್ನು ವಜಾ ಮಾಡಿತ್ತು. ಪ್ರಧಾನಿ ಮೋದಿ ಅವರು ಯಾವುದೇ ರಾಜ್ಯ ಸರ್ಕಾರವನ್ನು ವಜಾ ಮಾಡಿದ ಉದಾಹರಣೆ ಇಲ್ಲ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಸೇರಲು ಚಿಂತನೆ: ನಿಶಾ ಯೋಗೇಶ್ವರ್