ರಾಜಕೋಟ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ರಾಜಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ವಿಚಾರದಲ್ಲಿ ಕಾಂಗ್ರೆಸ್ ಶ್ರೀಮಂತ ಶಾಸಕ ಇಂದ್ರನೀಲ್ ರಾಜಗುರು ಅವರನ್ನು ಸೋಲಿಸಿದ್ದಾರೆ.
ಆರಂಭದಲ್ಲಿ ಹಿನ್ನಡೆಯಲ್ಲಿದ್ದ ರೂಪಾಣಿ ಕೊನೆ ಕೊನೆಗೆ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು. 2012ರಲ್ಲಿ ರಾಜಕೋಟ್ ಪೂರ್ವ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದ ರಾಜಗುರು ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಸಾರ್ವಜನಿಕವಾಗಿ ರೂಪಾನಿಗೆ ಸವಾಲು ಹಾಕಿದ್ದರು. ಈ ಸವಾಲಿಗೆ ರೂಪಾಣಿ ಪ್ರತಿಕ್ರಿಯೇ ನೀಡದ್ದಕ್ಕೆ ರಾಜಗುರು ನಾನೇ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿಮ್ಮನ್ನು ಸೋಲಿಸುತ್ತೇನೆ ಎಂದು ರಣಕಹಳೆ ಮೊಳಗಿಸಿದ್ದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರನ್ನು 2002ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಕಳುಹಿಸಿರುವ ಈ ಕ್ಷೇತ್ರದಲ್ಲಿ 1985ರಿಂದ ಸತತವಾಗಿ ಕಮಲ ಅರಳುತ್ತಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಈ ಕೇತ್ರದಲ್ಲಿ 7 ಬಾರಿ ಗೆದ್ದಿದ್ದಾರೆ. 85 ರಿಂದ ಸತತವಾಗಿ ಏಳು ಬಾರಿ ಗೆದ್ದಿದ್ದ 2002ರಲ್ಲಿ ನರೇಂದ್ರ ಮೋದಿ ಅವರಿಗೆ ಸ್ಥಾನ ತೆರವು ಮಾಡಿದ್ದ ಬಳಿಕ 2014ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ರಾಜೀನಾಮೆ ನೀಡಿದ್ದರು.
Advertisement
32 ವರ್ಷಗಳಿಂದ ಬಿಜೆಪಿಯನ್ನು ಗೆಲ್ಲಿಸುತ್ತಿರುವ, ಶೇ.100ರಷ್ಟು ನಗರ ಪ್ರದೇಶಗಳನ್ನೇ ಹೊಂದಿರುವ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಟೀದಾರ ಸಮುದಾಯದವರಿದ್ದಾರೆ. ಹೀಗಾಗಿ ರೂಪಾಣಿ ಈ ಚುನಾವಣೆಯಲ್ಲಿ ಸೋಲಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿ ರಾಜಗುರು ಕಣಕ್ಕೆ ಇಳಿದಿದ್ದರು.