ಚಂದ್ರಿಕಾ ಟಂಡನ್‌ ಮಂತ್ರ ಪಠಣದ ಆಲ್ಬಮ್‌ಗೆ ಪ್ರತಿಷ್ಠಿತ ಗ್ರ‍್ಯಾಮಿ ಪ್ರಶಸ್ತಿ

Public TV
1 Min Read
Chandrika Tandon

ಭಾರತೀಯ ಮೂಲದ ಅಮೇರಿಕನ್ ಬ್ಯುಸಿನೆಸ್ ಲೀಡರ್ ಹಾಗೂ ಸಂಗೀತಗಾರ್ತಿ ಚಂದ್ರಿಕಾ ಟಂಡನ್ (Chandrika Tandon) ಅವರ ಮಂತ್ರ ಪಠಣದ ಆಲ್ಬಮ್ ‘ತ್ರಿವೇಣಿ’ಗೆ ಪ್ರತಿಷ್ಠಿತ ಗ್ರ‍್ಯಾಮಿ ಪ್ರಶಸ್ತಿ (67th Annual Grammy Awards) ಲಭಿಸಿದೆ.

Chandrika Tandon 1

ಕರ್ನಾಟಕದ ಸೊಸೆ ಇಂದ್ರಾ ನೂಯಿ (Indra Nooyi) ಸಹೋದರಿ 71 ವರ್ಷದ ಚಂದ್ರಿಕಾ ಅವರ ಮಂತ್ರಪಠಣದ ಆಲ್ಬಂಗೆ ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ:ನಿರ್ದೇಶಕ ರಾಜ್ ಜೊತೆ ಸಮಂತಾ ಡೇಟಿಂಗ್?- ಚರ್ಚೆಗೆ ಗ್ರಾಸವಾಯ್ತು ನಟಿಯ ಪೋಸ್ಟ್

ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರೊಂದಿಗೆ ಸೇರಿ ಹಾಡನ್ನು ಹಾಡಿದ್ದರು. ಈ ಅಲ್ಬಂನಲ್ಲಿ ವೈದಿಕ ಮಂತ್ರಗಳನ್ನು ಪಠಿಸಿದ್ದರು.

ಮ್ಯೂಸಿಕ್ ಎಂದರೆ ಪ್ರೀತಿ, ಮ್ಯೂಸಿಕ್ ನಮ್ಮೆಲ್ಲರೊಳಗೆ ಬೆಳಕನ್ನು ಬೆಳಗಿಸುತ್ತದೆ. ನಮ್ಮ ಕತ್ತಲೆಯ ದಿನಗಳಲ್ಲಿಯೂ ಸಹ ಸಂಗೀತವು ಸಂತೋಷ ಮತ್ತು ನಗುವನ್ನು ಹರಡುತ್ತದೆ ಎಂದು ಲಾಸ್ ಏಂಜಲೀಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಚಂದ್ರಿಕಾ ವೇದಿಕೆಯಲ್ಲಿ ಮಾತನಾಡಿದ್ದಾರೆ.

ಅಂದಹಾಗೆ ಚೆನ್ನೈನಲ್ಲಿ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ಚಂದ್ರಿಕಾ ಮತ್ತು ಇಂದ್ರಾ ಅವರು ವೈದಿಕ ಪಠಣ ಮತ್ತು ಕರ್ನಾಟಕ ಸಂಗೀತ ಮನೆಯ ಸಾಂಪ್ರದಾಯಿಕ ಭಾಗವಾಗಿತ್ತು.

ಇಂದ್ರಾ ನೂಯಿ ಪೆಪ್ಸಿಕೋವನ್ನು 12 ವರ್ಷಗಳ ಕಾಲ ಸಿಇಒ ಆಗಿ ಮುನ್ನಡೆಸಿದ್ದರು ಮತ್ತು ಮತ್ತು ವಿಶ್ವದ 50 ಅತ್ಯಂತ ಪ್ರಭಾವಶಾಲಿ ಬ್ಯುಸಿನೆಸ್ ವುಮೆನ್‌ಗಳಲ್ಲಿ ಒಬ್ಬರಾಗಿದ್ದರು.

Share This Article