ಜಕಾರ್ತ: ಈ ತಿಂಗಳ ಆರಂಭದಲ್ಲಿ ಕಾಲ್ತುಳಿತದಿಂದಾಗಿ (Stampede) 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಇಂಡೋನೇಷ್ಯಾದ (Indonesia) ಫುಟ್‌ಬಾಲ್ ಕ್ರೀಡಾಂಗಣವನ್ನು (Football Stadium) ಕೆಡವಲು (Demolish) ನಿರ್ಧರಿಸಲಾಗಿದೆ.
ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೋ (Joko Widodo) ಮಂಗಳವಾರ ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾದ (FIFA) ಮುಖ್ಯಸ್ಥ ಜಿಯಾನಿ ಇನ್‌ಫಾಂಟಿನೋ (Gianni Infantino) ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕ್ರೀಡಾಂಗಣವನ್ನು ನೆಲಸಮಗೊಳಿಸುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲದೇ ಆ ಕ್ರೀಡಾಂಗಣವನ್ನು ಮರು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
Advertisement
Advertisement
ಈ ತಿಂಗಳ ಆರಂಭದಲ್ಲಿ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಗಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಆ ಕ್ರೀಡಾಂಗಣವನ್ನು ಕೆಡವಲು ನಿರ್ಧರಿಸಲಾಗಿದ್ದು, ಮತ್ತೆ ಅದನ್ನು ಫಿಫಾ ಮಾನದಂಡಗಳ ಪ್ರಕಾರ ಮರುನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ- ನೂರಾರು ಹೋರಾಟಗಾರರ ಬಂಧನ
Advertisement
ಅಕ್ಟೋಬರ್ 1 ರಂದು ಮಲಾಂಗ್ ನಗರದಲ್ಲಿ ನಡೆದ ಫುಟ್‌ಬಾಲ್ ಪಂದ್ಯದ ಬಳಿಕ ಗಲಭೆ ಸಂಭವಿಸಿತ್ತು. ಈ ವೇಳೆ ಪೊಲೀಸರು ಸ್ಟೇಡಿಯಂನಲ್ಲಿ ಅಶ್ರುವಾಯು ಪ್ರಯೋಗಿಸಿದ್ದರು. ಜನಸಂದಣಿಯೂ ಹೆಚ್ಚಿದ್ದರಿಂದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ, ಪೊಲೀಸರು, ಮಕ್ಕಳು ಸೇರಿದಂತೆ 130ಕ್ಕೂ ಹೆಚ್ಚು ಜನರು ಸ್ಟೇಡಿಯಂನಲ್ಲಿ ಸಾವನ್ನಪ್ಪಿದ್ದರು.
Advertisement
ಅಂದು ಸ್ಟೇಡಿಯಂನಲ್ಲಿ ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಸ್ಥಳೀಯ ತಂಡ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತ್ತು. ಇದರಿಂದ ಬೇಸರಗೊಂಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಚ್‌ಗೆ ನುಗ್ಗಿದ್ದರು. ಬಳಿಕ ಸಾಮೂಹಿಕ ಗಲಭೆ ಭುಗಿಲೆದ್ದಿತ್ತು. ಇದನ್ನೂ ಓದಿ: ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ