ಜಕಾರ್ತ: ಇಂಡೋನೇಷ್ಯಾ ಅಡುಗೆ ಎಣ್ಣೆಯ ಉತ್ಪಾದನೆಯಲ್ಲಿ ಬಳಸುವ ಉತ್ಪನ್ನಗಳ ಕೊರತೆ ಎದುರಿಸುತ್ತಿದ್ದು, ಇದೀಗ ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಸ್ತರಿಸಲು ಚಿಂತನೆ ನಡೆಸಿದೆ.
ವಿಶ್ವದ ಅತಿದೊಡ್ಡ ತಾಳೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಸಂಸ್ಕರಿಸಿದ, ಬಿಳುಪುಗೊಳಿಸಿದ ಹಾಗೂ ಡಿಯೋಡರೈಸ್ಡ್(ಆರ್‌ಬಿಡಿ) ಪಾಮ್ ಓಲಿನ್‌ನ ಸಾಗಣೆಯನ್ನು ನಿಲ್ಲಿಸಲು ಯೋಜಿಸಿದೆ. ಆದರೂ ಗುರುವಾರದಿಂದ ಪಾಮ್ ಓಲಿನ್ ಅಥವಾ ಇತರ ಉತ್ಪನ್ನಗಳ ರಫ್ತಿಗೆ ಅವಕಾಶ ನೀಡುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತದಲ್ಲಿ ಕೋವಿಡ್-19 ನಾಲ್ಕನೇ ಅಲೆ ಪ್ರಾಬಲ್ಯ ತುಂಬಾ ಕಡಿಮೆ: ವೈರಾಣು ತಜ್ಞ
Advertisement
Advertisement
ವಿಶ್ಲೇಷಕರ ಅಂದಾಜಿನ ಪ್ರಕಾರ, ಇಂಡೋನೇಷ್ಯಾದ ತಾಳೆ ಎಣ್ಣೆ ಉತ್ಪನ್ನಗಳ ಒಟ್ಟು ರಫ್ತಿನಲ್ಲಿ ಆರ್‌ಬಿಡಿ ಪಾಮ್ ಓಲಿನ್ ಎಣ್ಣೆ ಸುಮಾರು ಶೇ.40 ರಷ್ಟು ಇದೆ. ಇದರ ರಫ್ತು ನಿಷೇಧದಿಂದ ಇಂಡೋನೇಷ್ಯಾದ ಗಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ
Advertisement
ಇಂಡೋನೇಷ್ಯಾ ಸಾಮಾನ್ಯವಾಗಿ ತಿಂಗಳಿಗೆ ಸುಮಾರು 2.5 ಶತಕೋಟಿ ಡಾಲರ್(ಸುಮಾರು 19 ಸಾವಿರ ಕೋಟಿ ರೂ.)ನಿಂದ 3 ಶತಕೋಟಿ ಡಾಲರ್(22 ಸಾವಿರ ಕೋಟಿ ರೂ.) ತಾಳೆ ಎಣ್ಣೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ದೇಶದಲ್ಲಿ ಸಂಸ್ಕರಿಸಿದ ತಾಳೆ ಎಣ್ಣೆ ಕೊರತೆ ಹೆಚ್ಚಾದಲ್ಲಿ ರಫ್ತನ್ನು ನಿಷೇಧಿಸುವಂತೆ ತಯಾರಿಕಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.